ಬೆಂಗಳೂರು : ಇಂದು ನಾಡಿನೆಲ್ಲೆಡೆ ಮಹಾಶಿವರಾತ್ರಿ ಹಬ್ಬ ಈ ಹಬ್ಬದ ಪ್ರಯುಕ್ತ ಮಹಾಶಿವನ ಆರಾಧನೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಹಾವಾರ್ಡ್ ಶಾಲೆಯಲ್ಲಿ ನೆನ್ನೆ ಶಿವರಾತ್ರಿ ಆಚರಣೆ ಮಾಡಲಾಯಿತು. ಸನಾತನ ಧರ್ಮದಲ್ಲಿ ಗೋ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮಕ್ಕಳು ಚಾಲನೆ ನೀಡಿದರು.
ಮಕ್ಕಳಿಗೆ ಶಿವ ಪಾರ್ವತಿ ಸೇರಿದಂತೆ ವಿವಿಧ ವೇಷ ಭೂಷಣ ಧರಿಸಿ ಮಹಾಶಿವನ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಈ ಆವರಣದಲ್ಲಿ ಶಿವಲಿಂಗ ಮೂರ್ತಿಯನ್ನ ಪ್ರತಿಷ್ಠಾಪಿಸಿ ವಿಶೇಷವಾಗಿ ಶಾಲೆಯ ಪ್ರತಿ ಮಕ್ಕಳಿಂದ ಹಾಲಿನ ಅಭಿಷೇಕ ಮಾಡಿಸಿ ಶಿವನ ಕೃಪೆ ಮಕ್ಕಳು ಮತ್ತು ಪೋಷಕರು ಪಾತ್ರರಾದರು.
ಮಕ್ಕಳಿಗೆ ಇತಿಹಾಸ ಹಾಗೂ ಧರ್ಮದ, ಹಬ್ಬದ ಆಚರಣೆಗಳು ಬಗ್ಗೆ ಈ ವರ್ಷವೂ ಕೂಡ ಮಹಾ ಶಿವರಾತ್ರಿ ಆರಾಧನೆ ಮಾಡಲಾಯಿತು. ಮಕ್ಕಳು ಶಿವ ಪಾರ್ವತಿ, ಋಷಿ ಮುನಿಗಳು ವೇಷ ಧರಿಸಿ ಹಬ್ಬವನ್ನು ಸಂಭ್ರಮಿಸಿದರು.