ಬೆಂಗಳೂರು : ಬಾಹ್ಯಾಕಾಶ ಡಾಕಿಂಗ್ ಪ್ರಯೋಗ ಕಾರ್ಯಾಚರಣೆಯಡಿಯಲ್ಲಿ ಎರಡು ಉಪಗ್ರಹಗಳ ಬಹುನಿರೀಕ್ಷಿತ ಡಾಕಿಂಗ್‌ನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಂದೂಡಿದೆ. ಒಂದು ಉಪಗ್ರಹ ಇನ್ನೊಂದರ ಕಡೆಗೆ ಚಲಿಸುವುದು ನಿರೀಕ್ಷೆಗಿಂತ ಹೆಚ್ಚಾಗಿದೆ ಎಂದು ಉಲ್ಲೇಖಿಸಿದೆ.
ಈ ಕಾರ್ಯಾಚರಣೆ ಜನವರಿ 7 ರಂದು ನಡೆಯಬೇಕಿತ್ತು, ಆದರೆ ಇದೀಗ ಮುಂದೂಡಲಾಯಿತು. ನಿನ್ನೆ ಪ್ರಕಟಣೆ ಹೊರಡಿಸಿರುವ ಇಸ್ರೊ, ಸ್ಪೇಸ್ ಕ್ರಾಫ್ಟ್-ಎ ನಲ್ಲಿ 500 ಮೀ ನಿಂದ 225 ಮೀ ಹತ್ತಿರಕ್ಕೆ ಚಲಿಸಲು ಡ್ರಿಫ್ಟ್ ನ್ನು ಪ್ರಾರಂಭಿಸಿತು ಎಂದು ಹೇಳಿದೆ.
ಕೇಂದ್ರ ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಇಂದು ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಕ್ಯಾಂಪಸ್‌ನಲ್ಲಿ ಡಾಕಿಂಗ್‌ಗೆ ಹಾಜರಾಗಬೇಕಿತ್ತು. ಆ ಕಾರ್ಯಕ್ರಮ ಈಗ ರದ್ದಾಗಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಾಕಿಂಗ್ ಎನ್ನುವುದು ಗಗನಯಾತ್ರಿಗಳು ಮತ್ತು ಉಪಕರಣಗಳನ್ನು ಒಂದು ಬಾಹ್ಯಾಕಾಶ ನೌಕೆಯಿಂದ ಅದು ಡಾಕ್ ಮಾಡಿರುವ ಇನ್ನೊಂದು ಬಾಹ್ಯಾಕಾಶ ನೌಕೆಗೆ ವರ್ಗಾಯಿಸಲು ಸಹಾಯ ಮಾಡುವುದರಿಂದ ಡಾಕಿಂಗ್ ನಿರ್ಣಾಯಕವಾಗಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.