ಹುಬ್ಬಳ್ಳಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹಳೇ ಪ್ರಕರಣವನ್ನು ಮುನ್ನೆಲೆಗೆ ತರುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಬ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕೇಸ್ ಬಗ್ಗೆ ಮಾತನಾಡಿದರೆ, ನಿಮ್ಮ ಕೇಸ್ ಹೊರಗೆ ತರುತ್ತೇವೆ ಎಂಬ ಥೆಯರಿ ಕಾಂಗ್ರೆಸ್ ನದ್ದಾಗಿದೆ ಎಂದರು.
ಕುಮಾರಸ್ವಾಮಿ ವಿರುದ್ಧ ಗಣಿ ಪರವಾನಿಗೆ ಪ್ರಕರಣ 2008 ರದ್ದು. 2013ರಿಂದ 18 ರವರೆಗೆ ಹಾಗೂ ಈಗ ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ . ಕುಮಾರಸ್ವಾಮಿ ವಿರುದ್ಧ ಯಾಕೆ ತನಿಖೆ ಮಾಡಲಿಲ್ಲ. 2018-19 ರಲ್ಲಿ ಕುಮಾರಸ್ವಾಮಿ ಜತೆ ಕೈ ಜೋಡಿಸಿ ಮೈತ್ತಿ ಸರ್ಕಾರ ಮಾಡಿದ್ದರು. ಆಗ ಸುಮ್ಮನೆ ಇದ್ದಿದ್ದು ಯಾಕೆ ? ತಮಗೆ ಬೇಕಾದಾಗ ಏನೇ ಆದರೂ ಸರಿ, ಬೇಡವಾದಾಗ ತಪ್ಪು ಎಂಬುದು ಯಾವ ನೀತಿ ಎಂದು ಪ್ರಶ್ನಿಸಿದರು.