ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿ 2ನೇ ಅವಧಿಗೆ ಸಿ.ಎಸ್ ಷಡಾಕ್ಷರಿ ಪುನರಾಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ಖಜಾಂಚಿ ಸ್ಥಾನಗಳಿಗೆ ನಿನ್ನೆ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಪಿ.ಕೃಷ್ಣೇಗೌಡಗೆ 442 ಮತಗಳು ಬಂದರೆ, ಸಿ.ಎಸ್​.ಷಡಾಕ್ಷರಿಗೆ ಅವರಿಗೆ 507 ಮತಗಳು ಲಭಿಸಿದ್ದವು.

ಖಚಾಂಜಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ನಾಗರಾಜ ಆರ್​.ಜುಮ್ಮನ್ನವರ (ಷಡಾಕ್ಷರಿ ಬಣ), ವಿ.ವಿ.ಶಿವರುದ್ರಯ್ಯ (ಬಿ.ಪಿ.ಕೃಷ್ಣೇಗೌಡ ಬಣ) ವಿರುದ್ಧ ಕೇವಲ 18 ಮತಗಳ ಅಂತರದಿಂದ ಸೋಲು ಅನುಭವಿಸಿದರು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *