ಕಠ್ಮಂಡು : ನೇಪಾಳದಲ್ಲಿ ಇಂದು ಮುಂಜಾನೆ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಹಿಮಾಲಯ ಮಧ್ಯಭಾಗದ ಸಿಂಧುಪಾಲ್‌ಚೌಕ್ ಜಿಲ್ಲೆಯಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ.
ರಾಷ್ಟ್ರೀಯ ಭೂಕಂಪ ನಿರ್ವಹಣಾ ಮತ್ತು ಸಂಶೋಧನಾ ಕೇಂದ್ರ ತನ್ನ ವೆಬ್‌ಸೈಟ್‌ನಲ್ಲಿ ಭೂಕಂಪದ ಕೇಂದ್ರವು ಸಿಂಧುಪಾಲ್‌ಚೌಕ್ ಜಿಲ್ಲೆಯ ಭೈರವಕುಂಡದಲ್ಲಿ ಸ್ಥಳೀಯ ಕಾಲಮಾನ ಬೆಳಗಿನ ಜಾವ 2:51ಕ್ಕೆ ಆಗಿದೆ ಎಂದು ಗುರುತಿಸಿದೆ.
ನೇಪಾಳದ ಹಲವು ಪ್ರದೇಶಗಳಲ್ಲಿ ವಿಶೇಷವಾಗಿ ಪೂರ್ವ ಮತ್ತು ಮಧ್ಯ ಪ್ರದೇಶಗಳಲ್ಲಿ, ಭೂಮಿ ಕಂಪಿಸಿದ ಅನುಭವ ಉಂಟಾಗಿದೆ ಎಂದು ವರದಿ ಮಾಡಿದೆ. ಭಾರತ ಮತ್ತು ಟಿಬೆಟ್, ಚೀನಾದ ಗಡಿ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ ಎಂದು ವರದಿಗಳು ತಿಳಿಸಿವೆ.
ಇದರಿಂದ ಯಾವುದೇ ಜೀವಹಾನಿಯಾಗಲಿ, ಗಾಯಗೊಂಡಿರುವುದಾಗಲಿ ಕಂಡುಬಂದಿಲ್ಲ. ಆದ್ರೆ ಭೂಕಂಪನ ಸಂಭವಿಸಿದ ಪ್ರದೇಶಗಳಲ್ಲಿ ಜನ ಆತಂಕಗೊಂಡಿದ್ದಾರೆ ಎಂದು ತಿಳಿದುಬಂದಿದೆ.