ಬೆಂಗಳೂರು : ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಒಂದು ದಿನ ಮೊದಲು ಅಂದರೆ ಜ.14ರಂದು ಸಂಜೆ 5.14ಕ್ಕೆ ಸೂರ್ಯಾಭಿಷೇಕವಾಗಲಿದ್ದು. ಆದರೆ ಮೋಡ ಕವಿದ ವಾತಾವರಣದಿಂದ ಸೂರ್ಯರಶ್ಮಿ ಶ್ರೀ ಗಂಗಾಧರನ ಮೇಲೆ ಸ್ಪರ್ಶಿಸಲಿಲ್ಲ.

ಇಂದು ಜ. 14ರಂದು ಸಂಜೆ 5.14 ರಿಂದ 5.17ರವರೆಗೆ ಅಂದರೆ ಮೂರು ನಿಮಿಷಗಳ ನಡುವೆ ಸೂರ್ಯ ರಶ್ಮಿ ಗವಿಗಂಗಾಧರೇಶ್ವರ ಸ್ವಾಮಿಯನ್ನು ಸ್ಪರ್ಶಿಸುವ ಮುನ್ನ ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಸಾಗುವ ಸೂರ್ಯ ದೇವ ಶಿವದರ್ಶನ ಪಡೆಯುವ ಸಮಯವದು. ಆ ವೇಳೆ ಶಿವನ ವಿಗ್ರಹಕ್ಕೆ ಎಳನೀರು ಮತ್ತು ಕ್ಷೀರದಿಂದ ಅಭಿಷೇಕ ಮಾಡಲಾಗುತ್ತದೆ. ನಂತರ ಆಲಯದಲ್ಲಿ ಸಂಕಲ್ಪ ಪೂಜೆ ಮಾಡಲಾಗುವುದು.

ಶಿವನನ್ನು ಸೂರ್ಯ ರಶ್ಮಿ ಸ್ಪರ್ಶಿಸುವ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿರುತ್ತಾರೆ . ಮೋಡ ಅಡ್ಡ ಬಂದ ಹಿನ್ನೆಲೆಯಲ್ಲಿ ಸೂರ್ಯರಶ್ಮಿ ಸ್ಪರ್ಶಿಸಿದ್ದು ಕಾಣಲಿಲ್ಲ. ಪ್ರತಿ ವರ್ಷ ಭಕ್ತರಿಗೆ ಸೂರ್ಯರಶ್ಮಿ ವೀಕ್ಷಣೆಗೆ ಅನುಕೂಲವಾಗುವಂತೆ ದೇವಾಲಯದ ಹೊರಾಂಗಣದಲ್ಲಿ ದೊಡ್ಡ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿತ್ತು ಎಂದು ದೇವಾಲಯದ ಪ್ರಧಾನ ಅರ್ಚಕರು ತಿಳಿಸಿದರು.

Leave a Reply

Your email address will not be published. Required fields are marked *