ವಾಷಿಂಗ್ಟನ್ : ಸುಂಕದ ನೆಪದಲ್ಲಿ ಟ್ರಂಪ್ ಒತ್ತಡ ತಂತ್ರ ಅನುಸರಿಸುತ್ತಿರುವಂತೆ ಕಾಣಿಸುತ್ತಿದೆ. ಈ ಮೊದಲು ಸುಂಕ ಕಡಿತಕ್ಕೆ ಭಾರತ ಒಪ್ಪಿದೆ ಎಂದಿದ್ದ ಟ್ರಂಪ್ ಈಗ ಸ್ವರ ಬದಲಿಸಿದ್ದಾರೆ. ಭಾರತ ಗಣನೀಯವಾಗಿ ಸುಂಕ ಕಡಿತ ಮಾಡುತ್ತೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.
ಭಾರತ ಎಂದಿಗೂ ನಮ್ಮ ಉತ್ತಮ ಗೆಳೆಯ. ಆದರೆ ಸುಂಕದ ವಿಚಾರದಲ್ಲಿ ಭಾರತವನ್ನು ಒಪ್ಪಲ್ಲ. ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ದೇಶ ಭಾರತ ಎಂಬುದಷ್ಟೇ ನನ್ನ ಸಮಸ್ಯೆಯಾಗಿದೆ. ಏ.2ರಿಂದ ಜಾರಿಗೆ ಬರುವಂತೆ ಭಾರತ ವಿಧಿಸಲಿರುವ ಸುಂಕಕ್ಕೆ ಅನುಗುಣವಾಗಿ ಅಮೆರಿಕ ಭಾರತದ ಉತ್ಪನ್ನಗಳಿಗೆ ಸುಂಕ ವಿಧಿಸುತ್ತದೆ ಎಂದು ಪುನರುಚ್ಚರಿಸಿದರು.
ಈ ಮಧ್ಯೆ, ವೆಚ್ಚ ಕಡಿತದ ಭಾಗವಾಗಿ ಶಿಕ್ಷಣ ಇಲಾಖೆಯನ್ನೇ ಬಂದ್ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಟ್ರಂಪ್ ಸೂಚನೆ ನೀಡಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ ಅಮೆರಿಕ ಸಂಸತ್‌ನ ಅನುಮೋದನೆ ಇಲ್ಲದೇ ಶಿಕ್ಷಣ ಇಲಾಖೆಯನ್ನು ಬಂದ್ ಮಾಡೋಕೆ ಆಗಲ್ಲ ಎನ್ನಲಾಗುತ್ತಿದೆ.