ಸಾಲಭಾದೆ ತಾಳಲಾರದೆ ದಂಪತಿಗಳು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ನಾರಾಯಣ ಸ್ವಾಮಿ ದೇವಸ್ದಾನದ ಬೀದಿಯಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಕೊಳ್ಳೇಗಾಲ ಪಟ್ಟಣದ ನಾರಾಯಣ ಸ್ವಾಮಿ ಗುಡಿ ಬೀದಿಯ ನಿವಾಸಿಗಳಾದ ನಾಗೇಶ್ ( 56 ) ಹಾಗೂ ಅವರ ಪತ್ನಿ ಸತ್ಯ ಲಕ್ಷ್ಮಿ (45 ) ಆತ್ಮಹತ್ಯೆ ಮಾಡಿಕೊಂಡ ದಂಪತಿ.
ಆತ್ಮಹತ್ಯೆ ಮಾಡಿಕೊಂಡ ದಂಪತಿಗಳು ಸಾಲದ ಆರ್ಥಿಕ ಮುಗ್ಗಟ್ಟಿನಿಂದ ಬೇಸತ್ತು, ಸಾಲಗಾರರ ಕಾಟದಿಂದ ಒಂದೇ ತೊಲಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಳ್ಳೇಗಾಲ ಪಟ್ಟಣ ಠಾಣೆಯ ಪೊಲೀಸರು ಭೇಟಿನೀಡಿ ಮಹಜರ್ ನಡೆಸಿ , ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಿದ್ದಾರೆ.