ಮದ್ಯಪ್ರೇಮಿಗಳಿಗೆ ಈ ಕಡೆ ಸರ್ಕಾರ ಅತ್ತ ಕಂಪನಿಗಳು ಶಾಕ್ ಮೇಲೆ ಶಾಕ್ ನೀಡುತ್ತ ಬರುತ್ತಿದ್ದು. ಮದ್ಯ ಸೇವಿಸುವವರಿಗೆ ಪದೇ ಪದೇ ಮದ್ಯದ ಬೆಲೆ ಏರಿಕೆ ಮಾಡುತ್ತಿದ್ದು ಕುಡಿಯುವವರಿಗೆ ಫ಼ುಲ್ ನಡುಕ ಹುಟ್ಟಿಸಿದೆ .
ಇದೀಗ ಬಿಯರ್ ಕಂಪನಿಗಳು ಬಿಯರ್ ಬೆಲೆಯಲ್ಲಿ 10 ರಿಂದ 20 ರೂಪಾಯಿಗಳನ್ನು ಏರಿಕೆ ಮಾಡವಂತೆ ನಿರ್ಧರಿಸಿದೆ. ಇದರಿಂದ ಕಳೆದ 17 ತಿಂಗಳಲ್ಲಿ ಇದು 5 ನೇ ಸಲ ಬಿಯರ್ ಬೆಲೆಯಲ್ಲಿ ಹೆಚ್ಚಳ ಮಾಡಿರುವುದು. ಕಳೆದ ಒಂದು ತಿಂಗಳ ಹಿಂದೆಯಷ್ಟೆ ಬಿಯರ್ ಬೆಲೆ ಏರಿಕೆ ಮಾಡಿದ್ದ ಕಂಪನಿಗಳು ಮತ್ತೆ ಕಚ್ಚಾ ವಸ್ತುಗಳ ಮೇಲೆ ದರ ಏರಿಕೆಗೊಂಡಿದೆ ಎಂದು ಸಮ್ಜಾಯಿಷಿ ನೀಡಿ ಮತ್ತೆ ದರ ಏರಿಕೆ ಮಾಡುತ್ತಿದೆ.
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಿಯರ್ ದರ ಸುಮಾರು 60 ರೂಪಾಯಿಯಷ್ಟು ಏರಿಕೆಗೊಂಡಿದೆ. ಬಿಯರ್ ಮೇಲೆ ಶೇ 20 ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿದಾಗ ಬಿಯರ್ ದರ ಏರಿಕೆ ಮಾಡಿತ್ತು. ನಂತರ ಕಂಪನಿಗಳು 10 ರೂಪಾಯಿ ಏರಿಕೆ ಮಾಡಿದ್ದವು. ಮತ್ತೆ ಸರ್ಕಾರದಿಂದ ಫೆಬ್ರವರಿಯಲ್ಲಿ ಸುಂಕ ಹೆಚ್ಚಳ ಮಾಡಿ ಬಿಯರ್ ದರ ಇನ್ನಷ್ಟು ಏರಿಕೆ ಮಾಡಿತ್ತು. ಇದೀಗ ಮತ್ತೆ ಮತ್ತೆ ಬಿಯರ್ ದರ ಹೆಚ್ಚಳಕ್ಕೆ ಕಂಪನಿ ನಿರ್ಧರಿಸಿದೆ.
ಒಟ್ಟಾರೆಯಾಗಿ ಹೇಳೋದಾದ್ರೆ 15 ತಿಂಗಳಲ್ಲಿ ಮದ್ಯಗಳ ಬೆಲೆ ಸುಮಾರು 60 ರೂಪಾಯಷ್ಟು ಹೆಚ್ಚಳವಾದಂತಾಗಿದೆ. ಇದರಿಂದ ಮದ್ಯಪ್ರಿಯರು ಶೇಕ್ ಆಗಿದ್ದು ಬಿಯರ್ ಸೇವಿಸುವುದು ಮತ್ತಷ್ಟು ದುಬಾರಿಯಾದಂತಾಗಿದೆ .