ಬೆಂಗಳೂರು: ಆ.05 ಚಲಿಸುತ್ತಿದ್ದ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ನೋಡು ನೋಡುತ್ತಿದ್ದಂತೆ ಬೆಂಕಿ ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ .
ಕೆಆರ್ ಪುರಂ ಇಂದ ಹೆಬ್ಬಾಳ ಮಾರ್ಗ ಮಧ್ಯದಲ್ಲಿ ಬರುತ್ತಿದ್ದ ಬಸ್ ನಲ್ಲಿ ದಿಡೀರನೇ ಬೆಂಕಿ ಕಾಣಿಸಿಕೊಂಡು ಧಹಧಗನೇ ಉರಿದು ಬಸ್ ಸಂಪೂರ್ಣವಾಗಿ ಭಸ್ಮವಾಗಿದೆ ,
ಇನ್ನೊಂದೆಡೆ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಆಗಿದ್ದು , ಯಾರಿಗೂ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ, ಸುಮಾರು ಅರ್ಧ ಗಂಟೆಯಿಂದಲೂ ಬೆಂಕಿ ಹೊತ್ತಿ ಉರಿಯುತ್ತಿದ್ದು ಮಾನ್ಯತಾ ಟೆಕ್ ಪಾರ್ಕ್ ಬಳಿ ನಡೆದ ಘಟನೆ ಇದಾಗಿದೆ .