ಕಾರವಾರ:- ತಾಳಿ ಕಟ್ಟಿದ ಹೆಂಡತಿಯನ್ನೆ ಕತ್ತಿಯಿಂದ ಕಡಿದು ಹತ್ಯಗೈದ ಅರೋಪಿ ಉತ್ತರ ಕನ್ನಡ ಜಿಲ್ಲೆಯಸಿದ್ದಾಪುರ ತಾಲೂಕಿನ ಹೆಗ್ಗೋಡಮನೆಯ ಮಂಜುನಾಥ ಕೆರಿಯಾ ಚನ್ನಯ್ಯ ಈತನಿಗೆ ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ ಕಿಣಿ ರವರು ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ ದಂಡ ಹಾಗು ಮೃತಳ ಕುಟುಂಬಕ್ಕೆ 50 ಸಾವಿರ ರೂ ದಂಡ ವಿಧಿಸಿದ್ದಾರೆ. ಈ ಪ್ರಕರಣಕ್ಕೆ ಸರ್ಕಾರದ ಪರವಾಗಿ ಪಬ್ಲಿಕ್ ಪ್ರೋಸಿಕ್ಯೂಟರ್ ರಾಜೇಶ ಎಂ ಮಳಗಿಕರ್ ಸಾಕ್ಷಿದಾರರ ಸಾಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿ ಸಮರ್ಥವಾಗಿ ತಮ್ಮ ವಾದವನ್ನು ಮಂಡಿಸಿದ್ದರು. ಸಿದ್ದಾಪುರ ಸಿಪಿಆಯ್ ಆಗಿದ್ದ ಕುಮಾರ ಕೆ ಪ್ರಕರಣ ದಾಖಲಿಸಿ ದೋಶಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣ 20-05-2022 ರಂದು ನಡೆದಿತ್ತು.