ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚು ಮಳೆಯಾಗಿ ನಮ್ಮ ಮುಖ್ಯ ಬೆಳೆಯಾದ ಅಡಿಕೆ ಮತ್ತು ಕಾಳುಮೆಣಸು ತೀವ್ರ ಹಾನಿಯಾಗಿದೆ. ಅಡಿಕೆ ಭಾಗಸಹ ನಾಶವಾಗಿದ್ದು ಮೆಣಸು ಸಂಪೂರ್ಣ ಹಾಳಾಗಿದೆ ಎಂದು ಉತ್ತರಕನ್ನಡ ಜಿಲ್ಲೆಯ ರೈತರು ಇಂದು ಕುಮಟಾ ತಾಲೂಕ ಆಡಳಿತ ಕಚೇರಿಗೆ ಬಂದಿರುವ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯ ಅವರಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ.

ರೈತರಿಗೆ ಸಿಗುವ ಬೆಳೆ ವಿಮೆ ರೈತರಿಗೆ ಲಭ್ಯವಾಗಬೇಕಿದೆ.ಹಾಗಾಗಿ ರೈತರಿಗೆ ಆದ ಹಾನಿಯನ್ನು ಅಂದಾಜಿಸಿ ಅವರಿಗೆ ಆದಷ್ಟು ನಷ್ಟವನ್ನು ಪೂರ್ತಿ ನೀಡಬೇಕೆಂದು ಇಲಾಖೆಯ ಮುಖಾಂತರ ವರದಿ ಸಿದ್ಧಪಡಿಸಿ ರೈತರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ರೈತ ಹಿತರಕ್ಷಣ ಸಮಿತಿಯ ಅಧ್ಯಕ್ಷ ಎಂ ಜಿ ಭಟ್ ಹಾಗೂ ಪ್ರದೀಪ್ ಕುಮಾರ್ ಹೆಗಡೆ ಭಾರತೀಯ ಕೃಷಿ ಸಮಾಜ ಅಧ್ಯಕ್ಷ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.ಸಹಾಯಕ ಕಮಿಷನರ್ ಕಲ್ಯಾಣಿ ಕಾಂಬಳೆ ಕುಮಟಾ ತಹಸಿಲ್ದಾರ್ ಸತೀಶ್ ಗೌಡ ಅವರಿಗೆ ರೈತರು ಮನವಿ ಸಲ್ಲಿಸಿದ್ದಾರೆ.
ಸುಬ್ರಮಣ್ಯ ಭಟ್ ಕಾರವಾರ

Leave a Reply

Your email address will not be published. Required fields are marked *