ದೆಹಲಿ : ದೆಹಲಿಯಲ್ಲಿ ಇಂದಿನಿಂದ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನೆನ್ನೆ ಸಂಜೆ ನಡೆದಿದೆ. ಭಾರತೀಯ ಜನತಾ ಪಕ್ಷದ ನೇತೃತ್ವದ ದೆಹಲಿ ಸಚಿವ ಸಂಪುಟ ತನ್ನ ಮೊದಲ ಸಭೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಅನುಷ್ಠಾನಕ್ಕೆ ಅನುಮೋದನೆ ನೀಡಿದೆ ಎಂದು ಸಚಿವ ಪಂಕಜ್ ಸಿಂಗ್ ಅವರು ತಿಳಿಸಿದ್ದಾರೆ.
ಇದೇ ವೇಳೆ ದೆಹಲಿ ಸರ್ಕಾರದ ಖಾತೆಗಳನ್ನು ಸಂಪುಟ ಸಭೆಯಲ್ಲಿ ಹಂಚಿಕೆ ಮಾಡಲಾಗಿದೆ. ಸಿಎಂ ರೇಖಾ ಗುಪ್ತಾ ಹಣಕಾಸು, ಸೇವೆಗಳು ಮತ್ತು ಜಾಗೃತ ಖಾತೆಯನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ. ಪರ್ವೇಶ್ ವರ್ಮಾ ಅವರಿಗೆ ಲೋಕೋಪಯೋಗಿ ಇಲಾಖೆ, ನೀರು, ಶಾಸಕಾಂಗ ವ್ಯವಹಾರಗಳು, ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಖಾತೆ ನೀಡಲಾಗಿದೆ.
ಆಶಿಶ್ ಸೂದ್ ಅವರಿಗೆ ಗೃಹ, ವಿದ್ಯುತ್, ನಗರಾಭಿವೃದ್ಧಿ ಮತ್ತು ಶಿಕ್ಷಣ ಖಾತೆ ನೀಡಲಾಗಿದ್ದರೆ, ಮಂಜಿಂದರ್ ಸಿರ್ಸಾ ಅವರಿಗೆ ಕೈಗಾರಿಕೆಗಳು ಮತ್ತು ಪರಿಸರ ಖಾತೆ ನೀಡಲಾಗಿದೆ. ದೆಹಲಿ ವಿಧಾನಸಭೆಯ ಮೊದಲ ಸದನ ಸಭೆಯಲ್ಲಿ ಸಿಎಂ ರೇಖಾ ಗುಪ್ತಾ 14 ಸಿಎಜಿ ವರದಿಗಳನ್ನು ಮಂಡಿಸುವುದಾಗಿ ಘೋಷಿಸಿದ್ದಾರೆ.