ಉತ್ತರ ಪ್ರದೇಶ : ಶಾಸಕರೊಬ್ಬರು ಉತ್ತರ ಪ್ರದೇಶ ವಿಧಾನಸಭೆಯ ಬಾಗಿಲಿನಲ್ಲಿ ಪಾನ್ ಉಗುಳಿರುವ ವಿಚಾರಕ್ಕೆ ಸಂಬಂಧಿಸಿದ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ಇನ್ನುಮುಂದೆ ವಿಧಾನಸಭಾ ಆವರಣದಲ್ಲಿ ಪಾನ್ ಮಸಾಲ ಬ್ಯಾನ್​ ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರಲಿರುವ ನಿಷೇಧದ ಜೊತೆಗೆ, ಉಲ್ಲಂಘಿಸುವವರಿಗೆ 1,000 ರೂ.ಗಳ ದಂಡವನ್ನು ಸಹ ವಿಧಿಸಲಾಗುವುದು.

ಶಾಸಕನ ಕೃತ್ಯದ ನಂತರ ಕಾರ್ಪೆಟ್ ಸ್ವಚ್ಛಗೊಳಿಸಿರುವುದಾಗಿ ವಿಧಾನಸಭೆಗೆ ತಿಳಿಸಿದ ಒಂದು ದಿನದ ನಂತರ ವಿಧಾನಸಭೆ ಸ್ಪೀಕರ್ ಸತೀಶ್ ಮಹಾನಾ ನಿಷೇಧದ ಘೋಷಣೆ ಮಾಡಿದರು.

ನಾನು ಆ ಶಾಸಕರನ್ನು ವೀಡಿಯೊದಲ್ಲಿ ನೋಡಿದೆ. ಆದರೆ ನಾನು ಯಾವುದೇ ವ್ಯಕ್ತಿಯನ್ನು ಅವಮಾನಿಸಲು ಬಯಸುವುದಿಲ್ಲ. ಆದ್ದರಿಂದ, ನಾನು ಅವರ ಹೆಸರುಗಳನ್ನು ತೆಗೆದುಕೊಳ್ಳುವುದಿಲ್ಲ. ಯಾರಾದರೂ ಹೀಗೆ ಮಾಡುವುದನ್ನು ನೋಡಿದರೆ, ಅವರನ್ನು ತಡೆಯಬೇಕು ಎಂದು ನಾನು ಎಲ್ಲಾ ಸದಸ್ಯರನ್ನು ಒತ್ತಾಯಿಸುತ್ತೇನೆ. ಈ ಸಭೆಯನ್ನು ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿವಾಗಿದೆ.

ಒಳ್ಳೆಯ ಇ-ಮೇಜ್ ಎಲ್ಲರ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ, ಹಾಗೆಯೇ ಕೆಟ್ಟ ನಡವಳಿಕೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ವಿಧಾನಸಭೆಯು ಉತ್ತರ ಪ್ರದೇಶದ ಜನರಿಗೆ ಸೇರಿದ್ದು, ವ್ಯಕ್ತಿಯ ವೈಯಕ್ತಿಕ ಆಸ್ತಿಯಲ್ಲ ಎಂದು ಸ್ಪೀಕರ್ ಒತ್ತಿ ಹೇಳಿದರು.

Leave a Reply

Your email address will not be published. Required fields are marked *