ವಯನಾಡ್: ಕೇರಳದ ವಯನಾಡಿನಲ್ಲಿ ಜುಲೈ 30 ರಂದು ಸಂಭವಿಸಿದ ಭೂಕುಸಿತದ ನಂತರ ಪತ್ತೆಯಾದ 31 ಮೃತ ದೇಹಗಳು ಮತ್ತು 158 ದೇಹದ ಭಾಗಗಳ ಸಾಮೂಹಿಕ ಅಂತ್ಯಕ್ರಿಯೆಯನ್ನು ಸೋಮವಾರ ಸಮೀಪದ ಟೀ ಎಸ್ಟೇಟ್ನಲ್ಲಿ ಸಿದ್ಧಪಡಿಸಲಾದ ಸಮಾಧಿಯಲ್ಲಿ ನೆರವೇರಿಸಲಾಯಿತು ಎಂದು ರಾಜ್ಯ ಕಂದಾಯ ಸಚಿವ ಕೆ ರಾಜನ್ ಸೋಮವಾರ ಮಾಧ್ಯದವರಿಗೆ ತಿಳಿಸಿದ್ದಾರೆ
ಪ್ರತಿ ದೇಹಕ್ಕೆ ನಿಗದಿಪಡಿಸಿದ ಗುರುತಿನ ಸಂಖ್ಯೆ ಮತ್ತು ದೇಹದ ಭಾಗಗಳಿಂದ ಶೇಖರಿಸಿಕೊಂಡ ಡಿಎನ್ಎ ಮಾದರಿಗಳ ಪ್ರಕಾರ ಸಮಾಧಿಗಳನ್ನು ಗುರುತಿಸಲಾಗುವುದು ಎಂದು ರಾಜನ್ ಹೇಳಿದರು. ಇಲ್ಲಿ ಮಾಧ್ಯಮದವರನ್ನು ಭೇಟಿ ಮಾಡಿದ ಸಚಿವರು, ನಾಪತ್ತೆಯಾದವರ ಪತ್ತೆಗೆ ಶೋಧ ಕಾರ್ಯ ಮುಂದುವರಿಯಲಿದೆ ಅಂತಲೂ ಕೂಡ ತಿಳಿಸಿದರು.
ಗುರುತಿಸಲಾಗದ 31 ಮೃತದೇಹಗಳನ್ನು ಮೊದಲು ಹೂಳಲಾಗುವುದು. ನಂತರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿದ ದೇಹದ ಪ್ರತಿಯೊಂದು ಭಾಗವನ್ನು ಪ್ರತ್ಯೇಕ ಸಮಾಧಿಯಲ್ಲಿ ಹೂಳಲಾಗುವುದು, ಹಾಗೂ ಸಂಪುಟ ಉಪ ಸಮಿತಿ ಸಭೆಯ ನಂತರ ಪ್ರಕ್ರಿಯೆ ಆರಂಭವಾಗಲಿದೆ ಎಂದು ರಾಜನ್ ಹೇಳಿದ್ದಾರೆ.
ಚಾಲಿಯಾರ್ ನದಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಕೇಂದ್ರೀಕರಿಸುವ ಶೋಧ ಕಾರ್ಯಾಚರಣೆಯನ್ನು ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.
ಈ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಹ್ಯಾರಿಸನ್ಸ್ ಮಲಯಾಳಂ ಲಿಮಿಟೆಡ್ ಒಡೆತನದ 64 ಸೆಂಟ್ಸ್ ಭೂಮಿಯಲ್ಲಿ ಸಿದ್ಧಪಡಿಸಲಾದ ಸಮಾಧಿಯಲ್ಲಿ ಸಾಮೂಹಿಕ ಸಮಾಧಿ ನಡೆಸಿದರು. ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಶವಕ್ಕಾಗಿ ಶ್ವಾನಗಳ ಸೇವೆಯನ್ನು ಕೋರಲಾಗಿದ್ದು, ಇಂದು ಇನ್ನೂ 15 ಶ್ವಾನಗಳು ಶೋಧ ಕಾರ್ಯಾಚರಣೆಗೆ ಸೇರುವ ನಿರೀಕ್ಷೆಯಿದೆ” ಎಂದು ರಾಜನ್ ಹೇಳಿದರು. ಭಾನುವಾರ ಹೆಚ್ಚಿನ ಶವಗಳನ್ನು ಗುರುತಿಸಿದ್ದರಿಂದ ನಾಪತ್ತೆಯಾದವರ ಸಂಖ್ಯೆ ಕಡಿಮೆಯಾಗಿದೆ ಎಂತಲೂ ಅವರು ತಿಳಿಸಿದ್ದಾರೆ.
ಶನಿವಾರ, ಐದು ಶವಗಳನ್ನು ಸಮಾಧಿ ಮಾಡಲಾಯಿತು, ಮತ್ತು ಭಾನುವಾರ ಇನ್ನೂ ಎಂಟು ದೇಹಗಳನ್ನು ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಸಿದ್ಧಪಡಿಸಿದ ಸಮಾಧಿಗಳಲ್ಲಿ ಇಡಲಾಯಿತು. ಎಲ್ಲಾ ಧರ್ಮಗಳ ಪ್ರಾರ್ಥನೆ ಮತ್ತು ಅಂತಿಮ ವಿಧಿಗಳ ನಡುವೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.