ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೇಗವಾಗಿ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಅಥವಾ ಸುದ್ದಿಗಳು ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೇ ಸುದ್ದಿಯೊಂದು ವೈರಲ್ ಆಗುತ್ತಿದೆ. ಹೌದು ಥಾಯ್ ಲ್ಯಾಂಡ್ ನ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆಗಾಗಿ ಟಾಯ್ಲೆಟ್ ಗೆ ಹೋಗಿದ್ದಾನೆ. ಅಲ್ಲಿನ ಸರಿಸುಮಾರು 12 ಅಡಿ ಉದ್ದದ ಬೃಹದಾಕಾರದ ಹೆಬ್ಬಾವೊಂದು ವ್ಯಕ್ತಿಯ ಖಾಸಗಿ ಜಾಗಕ್ಕೆ ಕಚ್ಚಿದೆ. ಆದರೆ ಸತ್ತಿದ್ದು ಮಾತ್ರ ಹೆಬ್ಬಾವು. ಅಚ್ಚರಿ ಎನಿಸಿದ್ರೂ ಇದು ನಿಜ ಅಷ್ಟಕ್ಕೂ ಆಗಿದ್ದು ಏನಪ್ಪ ಅಂತ ಅನ್ನೋದಾದ್ರೆ ಇಲ್ಲಿದೆ ಮಾಹಿತಿ .
ಥಾಯ್ ಲ್ಯಾಂಡ್ ನಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಟಾಯ್ಲೆಟ್ ನಲ್ಲಿ ಹಾವು ವ್ಯಕ್ತಿಯೊಬ್ಬರಿಗೆ ಕಚ್ಚಿದೆ. ಆದರೆ ಆ ವ್ಯಕ್ತಿಯ ಬದಲಾಗಿ ಹಾವೇ ಸತ್ತಿದೆ. ಈಗ ಮಳೆಗಾಲವಾದ್ದರಿಂದ ಹಾವುಗಳು ಎಲ್ಲೆಂದರಲ್ಲಿ ಸೇರಿಕೊಳ್ಳುತ್ತವೆ. ಮನೆಯ ಒಳಗೆ, ಶೂ ಒಳಗೆ, ಟಿ.ವಿ, ಅಡುಗೆ ಮನೆ, ಬೈಕ್, ಕಾರು ಹೀಗೆ ಎಲ್ಲಂದರಲ್ಲಿ ಹಾವುಗಳು ಸೇರಿಕೊಳ್ಳುತ್ತಿರುತ್ತದೆ ಹಾಗಾಗಿ ಎಚ್ಚರಿಕೆಯಿಂದಿರುವುದು ಬಹಳ ಮುಖ್ಯ. ಅದೇ ರೀತಿ ಥಾಯ್ ಲ್ಯಾಂಡ್ ನ ಮನೆಯೊಂದರ ಟಾಯ್ಲೆಟ್ ನಲ್ಲಿ ಹಾವೊಂದು ಸೇರಿಕೊಂಡಿದೆ. ಟಾಯ್ಲೆಟ್ ನ ಕಮೋಡ್ ಒಳಗೆ ಹಾವು ಸೇರಿಕೊಂಡಿದ್ದು, ಮನೆಯ ವ್ಯಕ್ತಿ ನಿತ್ಯ ಕರ್ಮಕ್ಕಾಗಿ ಟಾಯ್ಲೆಟ್ ನಲ್ಲಿ ಕುಳಿತಿದ್ದಾನೆ. ಸ್ವಲ್ಪ ಸಮಯದಲ್ಲೇ ಆತನ ವೃಷಣದಲ್ಲಿ ತುಂಬಾ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಏನಾಗಿದೆ ಎಂದು ನೋಡಿದ ಕೂಡಲೇ ಕಮೋಡ್ ನಲ್ಲಿ ಹೆಬ್ಬಾವು ಕಂಡಿದೆ. ಹಾವು ಕಂಡ ಬಳಿಕ ಹೆದರದೇ ಹೆಬ್ಬಾವನ್ನು ಹಿಡಿದು ತನ್ನ ಕೈಯಾರೆ ಕೊಂದೇ ಬಿಟ್ಟಿದ್ದಾನೆ
ಇನ್ನೂ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಥಾನತ್ ತಾಂಗ್ರೆವಾನಾನ್ ಎಂದು ಹೇಳಲಾಗಿದ್ದು. ಖುದ್ದು ತಾನೆ ತನ್ನ ಸೋಷಿಯಲ್ ಮಿಡಿಯಾ ಮೂಲಕ ನಡೆದ ಘಟನೆಯ ಬಗ್ಗೆ ಎಲ್ಲವನ್ನೂ ವಿವರಿಸಿದ್ದಾನೆ. ಆತನ ಪೋಸ್ಟ್ ನಲ್ಲಿರುವಂತೆ, ನಾನು ಪ್ರತಿನಿತ್ಯ ಟಾಯ್ಲೆಟ್ ಗೆ ಹೋಗುವ ಮುಂಚೆ ಫ್ಲಶ್ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದೇನೆ. ಅದರಂತೆ ಈ ದಿನವೂ ಫ್ಲಶ್ ಮಾಡಿ ಕುಳಿತಿದ್ದಿದ್ದೇನೆ. ಅಲ್ಲಿ ಹಾವು ಇರುವ ಬಗ್ಗೆ ಸುಳಿವೇ ನನಗೆ ಸಿಕ್ಕಿರಲಿಲ್ಲ. ಎಂದಿನಂತೆ ನಿತ್ಯಕರ್ಮಕ್ಕೆ ಕುಳಿತ ನನಗೆ ಕೆಲವೇ ನಿಮಿಷಗಳಲ್ಲಿ ನನ್ನ ವೃಷಣಗಳ ಬಳಿ ಏನೋ ಕಚ್ಚಿದಂತೆ ಭಾಸವಯಿತು. ಬಳಿಕ ಏನೋ ಇದೆ ಅಂತಾ ನೊಡಿದಾಗ ಒಳಗೆ ಹೆಬ್ಬಾವು ಇರುವುದು ಕಂಡಿದೆ.
ಆನಂತರ ನಾನು ಕೂಡಲೇ ಹಾವಿನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು, ಹಾವನ್ನು ಹೊರಗೆ ಎಳೆಯಲು ಪ್ರಯತ್ನಿಸಿದೆ. ಹಾವು ತುಂಬಾ ಬಲಿಷ್ಟವಾಗಿತ್ತು. ಹಾಗಾಗಿ ಹಾವು ಹೊರಗೇ ಬರಲೇ ಇಲ್ಲ ನನಗೆ ಕೋಪ ಹೆಚ್ಚಾಗಿ ಟಾಯ್ಲೆಟ್ ಬ್ರಷ್ ನಿಂದ ಹಾವಿಗೆ ಜೋರಾಗಿ ಹೊಡೆದೆ. ಬಳಿಕ ಹಾವು ಹೊರಬಂತು. ಹಾವು ಸಾಯುವ ವರೆಗೂ ಹೊಡೆಯುತ್ತಲೇ ಇದ್ದೆ. ನಾನು ಹೊಡೆದಿದ್ದಕ್ಕೆ ಹಾವು ಕೊನೆಗೆ ಸತ್ತು ಹೋಯ್ತು. ನಂತರ ಸೆಕ್ಯುರಿಟಿಯನ್ನು ಕರೆದು ಹಾವನ್ನು ತೆಗೆದುಕೊಂಡು ಹೋಗಲು ಹೇಳಿದೆ. ಬಳಿಕ ಅಕ್ಕಪಕ್ಕ ಮನೆಯವರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ. ಅದೃಷ್ಟವಶಾತ್ ನನಗೆ ಯಾವುದೇ ಸಮಸ್ಯೆಯಾಗಿಲ್ಲ, ನಾನು ಕ್ಷೇಮವಾಗಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಹಾಗೂ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.