ಕೆಲವು ಶಿಕ್ಷಕರು ಯಾವಾಗ ಈ ಶಾಲೆಯಿಂದ ಹೊಗ್ತಾರೆ ಅನ್ನುವಂತಹ ಸಂಧರ್ಭದಲ್ಲಿ ಸೇವೆಯಿಂದ ನಿವೃತ್ತಿಯಾದ ಶಿಕ್ಷಕಿಯನ್ನು ಬಿಟ್ಟು ಕೊಡದೆ ಕಣ್ಣೀರು ಹಾಕುತ್ತಾ ತಬ್ಬಿಕೊಂಡು ನಿಂತ ಶಾಲಾ ಮಕ್ಕಳನ್ನು ಕಂಡಾಗ ನಿಜಕ್ಕು ಆ ಶಿಕ್ಷಕಿಯ ಸೇವೆ ಹೇಗಿತ್ತು, ಮಕ್ಕಳ ಜೊತೆಗೆ ಇರುವ ಭಾಂದವ್ಯ, ಕಲಿಕಾ ಶೈಲಿ, ಭೋದನೆ, ನಡೆ ನುಡಿ, ಆತ್ಮೀಯ ಸಂಭಂಧ, ವಿದ್ಯಾರ್ಥಿಗಳ ಜೊತೆಗಿನ ಒಡನಾಟ ಎಷ್ಟೊಂದು ಎಂದು ಸ್ಪಷ್ಟವಾಗಿ ಇಲ್ಲಿ ಕಾಣಬಹುದು.
ಶಿಕ್ಷಕ ಅಥವಾ ಶಿಕ್ಷಕಿ ಕೇವಲ ಶಾಲೆ, ಭೋದನೆ, ಆಟ, ಪಾಠ ಸಂಬಂದಕ್ಕೆ ಸೀಮಿತ ಎಂಬುದಕ್ಕಿಂತ ಮಕ್ಕಳ ಬಗೆಗೆ ಇರುವ ನೋಟ ಅತ್ಯಂತ ಪ್ರಮುಖ ಎಂಬುದು ನಿವೃತ್ತ ಶಿಕ್ಷಕಿ ಸುನಂದಾ ಕುಲಕರ್ಣಿ ಅವರನ್ನು ಬಿಟ್ಟು ಕೊಡದ ಮಕ್ಕಳ ನಡೆ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡದೆ ಇರಲಾರದು.
ಇಂತಹದೊಂದು ಆದರ್ಶ ಶಿಕ್ಷಕಿಯ ವ್ಯಕ್ತಿತ್ವ ಗೊತ್ತಾಗಿದ್ದು ಗದಗ ಜಿಲ್ಲೆಯ, ಗದಗ ಗ್ರಾಮೀಣ ಶಿಕ್ಷಣ ವಲಯದ ಪಾಪನಾಶಿ ಗ್ರಾಮದ ಶಾಲೆಯ ನಿವೃತ್ತ ಶಿಕ್ಷಕಿಯ ಬಿಳ್ಕೊಡುವ ಸಮಾರಂಭದಲ್ಲಿ ಸಾಕ್ಷಿಕರಿಸುತ್ತಿದೆ..