‘The Trial’ ಸೀರಿಸ್ನಲ್ಲಿ ಕಾಜೋಲ್: ಪ್ರಚಾರಕ್ಕಾಗಿ ‘ಸೋಷಿಯಲ್ ಮೀಡಿಯಾದಿಂದ ಬ್ರೇಕ್’ ಗಿಮಿಕ್
ಬಾಲಿವುಡ್ ನಟಿ ಕಾಜೋಲ್ ಸಾಮಾಜಿಕ ಜಾಲತಾಣದಿಂದ ಬ್ರೇಕ್ ಪಡೆಯುವುದಾಗಿ ಹೇಳಿದ್ದು, ‘The Trial”ನ ಪ್ರಚಾರದ ಭಾಗವಾಗಿದೆ.
ಜೂನ್ 9 ರಂದು ಬಾಲಿವುಡ್ ನಟಿ ಕಾಜೋಲ್ ಸಾಮಾಜಿಕ ಜಾಲತಾಣದಿಂದ ಬ್ರೇಕ್ ಪಡೆಯುವುದಾಗಿ ಘೋಷಿಸಿ ಅಭಿಮಾನಿಗಳ ಆತಂಕಕ್ಕೆ ಕಾರಣರಾದರು.
ಇನ್ಸ್ಟಾಗ್ರಾಮ್ನಿಂದ ಎಲ್ಲಾ ಪೋಸ್ಟ್ಗಳನ್ನು ಇದ್ದಕ್ಕಿದ್ದಂತೆ ಡಿಲೀಟ್ ಮಾಡುವ ಮೂಲಕ ಅಭಿಮಾನಿಗಳ ಆಶರ್ಯಕ್ಕೆ ಕಾರಣರಾದರು. ನಟಿಯ ಈ ವರ್ತನೆಗೆ ಹಲವು ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದರೆ, ಕೆಲ ನೆಟ್ಟಿಗರು ‘ಪ್ರಚಾರದ ಗಿಮಿಕ್’ ಎಂದು ಕರೆದರು. ಇದೀಗ ನೆಟಿಜನ್ಗಳ ಊಹೆ ಸರಿಯಾಗಿದೆ.
ನಟಿ ಕಾಜೋಲ್ ತಮ್ಮ ಮುಂಬರುವ ವೆಬ್ ಸರಣಿ ‘ದಿ ಟ್ರಯಲ್’ನ ಶೀಘ್ರ ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ. ಕಾಜೋಲ್ ತಮ್ಮ ಹೊಸ ಸರಣಿ ”The Trial”ನಲ್ಲಿ ವಕೀಲೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯ ಟ್ರೇಲರ್ ಜೂನ್ 12ರಂದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಲಿದೆ. ಇದರ ಪ್ರಚಾರದ ಭಾಗವಾಗಿ ನಟಿ ನಿನ್ನೆ ಇನ್ಸ್ಟಾಗ್ರಾಮ್ ಪೋಸ್ಟ್ಗಳನ್ನೆಲ್ಲಾ ಡಿಲೀಟ್ ಮಾಡಿ ಗಮನ ಸೆಳೆದಿದ್ದರು.
ಕಾಜೋಲ್ ರಹಸ್ಯಕರ ಪೋಸ್ಟ್: ನಟಿ ಕಾಜೋಲ್ ಇನ್ಸ್ಟಾಗ್ರಾಮ್ನಲ್ಲಿ ನಿನ್ನೆ ಒಂದು ರಹಸ್ಯಕರ ಪೋಸ್ಟ್ ಶೇರ್ ಮಾಡಿದ್ದರು. ಆ ಪೋಸ್ಟ್ಗೆ ‘ಸೋಷಿಯಲ್ ಮೀಡಿಯಾದಿಂದ ಬ್ರೇಕ್’ ಪಡೆಯುವುದಾಗಿ ಕ್ಯಾಪ್ಷನ್ ಕೊಟ್ಟಿದ್ದರು. “ನನ್ನ ಜೀವನದ ಕಠಿಣ Trial ಒಂದನ್ನು ಎದುರಿಸುತ್ತಿದ್ದೇನೆ” ಎಂಬುದು ಪೋಸ್ಟ್ನಲ್ಲಿ ಬರೆದಿತ್ತು (Facing one of the toughest trials of my life). ಪ್ರತಿಭಾವಂತ ನಟಿಯ ಈ ಇನ್ಸ್ಟಾ ಪೋಸ್ಟ್ ಮತ್ತು ಸ್ಟೋರಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ನಟಿ ಈ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಹಳೆಯ 922 ಪೋಸ್ಟ್ಗಳು ಡಿಲೀಟ್ ಆಗಿದ್ದವು. ಆದರೆ ಇಂದು ಆ ಎಲ್ಲಾ ಪೋಸ್ಟ್ಗಳು ಸಹ ಕಾಜೋಲ್ ಅವರ ಅಧಿಕೃತ ಇನ್ಸ್ಟಾ ಪೇಜ್ನಲ್ಲಿ ಕಾಣಿಸಿಸುತ್ತಿವೆ.
ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಬ್ರೇಕ್ ಪಡೆದ ಕಾಜೋಲ್, ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದರು. ನೀಲಿ ಬಣ್ಣದ ಸಾಧಾರಣ ಉಡುಗೆಯಲ್ಲಿ ಕಾಣಿಸಿಕೊಂಡ ನಟಿ ಯಾವುದೋ ಚಿಂತೆಯಲ್ಲಿರುವಂತೆ ಕಾಣುತ್ತಿದ್ದು. ಪಾಪರಾಜಿಗಳಿಗೆ ಸ್ಪಂದಿಸದೇ ಕಾರಿನ ಬಳಿ ವೇಗವಾಗಿ ನಡೆದು ಹೋದರು. ಸೋಷಿಯಲ್ ಮೀಡಿಯಾದಿಂದ ಬ್ರೇಕ್ ಘೋಷಣೆ ಬೆನ್ನಲ್ಲೇ ಪಾಪರಾಜಿ ಹಂಚಿಕೊಂಡ ಈ ವಿಡಿಯೋ ಅಭಿಮಾನಿಗಳ ಆತಂಕ ಹೆಚ್ಚಿಸಿತ್ತು.
ಅಭಿಮಾನಿಗಳು ನಟಿಗೆ ವರ್ಚುವಲ್ ವೇದಿಕೆಯಲ್ಲೇ ಶಕ್ತಿ ತುಂಬಿದ್ದರೆ, ಹಲವರು ಇದು ಅವರ ಮುಂದಿನ ಸಿನಿಮಾ ಪ್ರಚಾರದ ಗಿಮಿಕ್ ಎಂದು ಊಹಿಸಿದ್ದರು. ಕೊನೆಗೂ ಕೆಲ ಸಾಮಾಜಿಕ ಜಾಲತಾಣ ಬಳಕೆದಾರರ ಊಹೆ ಸರಿಯಾಗಿದೆ. ಇಂದು ತಮ್ಮ ಮುಂದಿನ ಸೀರಿಸ್ಗೆ ಸಂಬಂಧಿಸಿದ ಪೋಸ್ಟ್ ಶೇರ್ ಮಾಡಿದ್ದಾರೆ. ”The Trial” ಟ್ರೇಲರ್ ಜೂನ್ 12ರಂದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಅನಾವರಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
‘ದಿ ಟ್ರಯಲ್’ ಅಮೇರಿಕನ್ ಕೋರ್ಟ್ರೂಮ್ ಸರಣಿಯ ಭಾರತೀಯ ರೂಪಾಂತರವಾಗಿದೆ. ಇದರಲ್ಲಿ ನಟಿ ಜೂಲಿಯಾನಾ ಮಾರ್ಗುಲೀಸ್ ಮಹಿಳಾ ವಕೀಲರಾಗಿ ನಟಿಸಿದ್ದಾರೆ. 2016ರಲ್ಲಿ ಬಿಡುಗಡೆ ಕಂಡ ಈ ಸರಣಿಯು 7 ಸೀಸನ್ಗಳನ್ನು ಹೊಂದಿದೆ. ಕಾಜೋಲ್ ನಟಿಸುತ್ತಿರುವ ದಿ ಟ್ರಯಲ್ ಅನ್ನು ಸುಪರ್ಣ್ ವರ್ಮಾ ನಿರ್ದೇಶಿಸಿದ್ದಾರೆ. ಈ ಸರಣಿಯಲ್ಲಿ ನಟಿ ಕಾಜೋಲ್ ತಮ್ಮ ಪತಿಯ ಕೇಸ್ನಲ್ಲಿ ವಕೀಲೆಯಾಗಿ ಹೋರಾಡುತ್ತಾರೆ.