ಈ ಮಂತ್ರಗಳು ನಿಮ್ಮ ಮಕ್ಕಳ ವಿದ್ಯಾಭ್ಯಾಸ ಬುದ್ಧಿ, ಶಕ್ತಿ, ಸದ್ಗುಣ, ಆರೋಗ್ಯ, ಸಂಪತ್ತನ್ನು, ನೀಡಿ ಉತ್ತಮ ಭವಿಷ್ಯವನ್ನು ರೂಪಿಸುತ್ತದೆ,
ಈ ಮಂತ್ರ ರಾಮಬಾಣದಂತೆ ನಿಮ್ಮ ಮಕ್ಕಳಿಗೆ ರಕ್ಷಾ ಕವಚದಂತೆ ಸದಾ ಕಾಪಾಡುತ್ತದೆ, ಒಳ್ಳೆಯ ಸಂಸ್ಕಾರ ದಾರಿಯಲ್ಲಿ ನಡೆಯಲು ಪ್ರೇರೇಪಿಸುತ್ತದೆ, ಸಮಾಜಕ್ಕೆ ಒಳ್ಳೆಯ ಪ್ರಜೆಯನ್ನಾಗಿ ಮಾಡುವ, ಅಂತಹ ಮಂತ್ರವಾದರೂ ಯಾವುದು, ಯಾವ ರೀತಿ ಮಂತ್ರ ಕೆಲಸ ಮಾಡುತ್ತದೆ, ಮತ್ತು ಮಂತ್ರ ದೇವತೆಗಳು ಯಾರು…? ಈ ಮಂತ್ರದ ಶಕ್ತಿಯಿಂದ ಏನೆಲ್ಲ ಬದಲಾವಣೆಗಳು ನಿಮ್ಮ ಮನೆ ಮತ್ತು ನಿಮ್ಮ ಮಕ್ಕಳಲ್ಲಿ ಕಾಣಬಹುದು ಎಂಬುದನ್ನು ತಿಳಿಯೋಣ ಬನ್ನಿ?
🌺🌺🌺🌺🌺🌺🌺

*ಒಂದನೇ ಮಂತ್ರ ಗಣಪತಿಯ ಮೂಲ ಮಂತ್ರ*

*1) ಓಂ ಗಂ ಗಣಪತಿಯೇ ನಮಃ*
ಎಂಬ ಮಂತ್ರವನ್ನು ಮಕ್ಕಳಿಂದ  21 ಬಾರಿ  ಹೇಳಿಸುವುದರಿಂದ ಮಕ್ಕಳಲ್ಲಿ ವಿದ್ಯಾಭ್ಯಾಸದಲ್ಲಿ ಯಾವುದೇ ಅಡೆತಡೆಗಳು ಆಗದಂತೆ ಮಹಾಗಣಪತಿ ಮಕ್ಕಳನ್ನು ಒಳ್ಳೆಯ ಗುರಿ ಮುಟ್ಟಿಸುವರು, ಅವರ ಜೀವನದಲ್ಲಿ ವಿದ್ಯಾಭ್ಯಾಸ ಮತ್ತು ಉದ್ಯೋಗದಲ್ಲಿ ಯಾವುದೇ ತೊಂದರೆಗಳು ಬಾರದಂತೆ ಮಹಾಗಣಪತಿ ಜೊತೆಯಲ್ಲಿ ನಿಂತು ಒಳ್ಳೆಯ ಸ್ಥಾನಮಾನ ಗೌರವವನ್ನು ಈ ಭೂಲೋಕದಲ್ಲಿ ಎಲ್ಲಾ ಕಡೆಯಲ್ಲಿ ಕಲ್ಪಿಸಿಕೊಡುತ್ತಾರೆ.
🌺🌺🌺🌺🌺🌺🌺

*ಎರಡನೇ ಮಂತ್ರ  ನೀಲ ಸರಸ್ವತಿ ಮಂತ್ರ*

*2) ಓಂ ಐಂ ನಿಂ ಸೋಹಂ ನೀಲ ಸರಸ್ವತಿಯೇ ನಮಃ*
ಎಂಬ ಮಂತ್ರವನ್ನು ಪ್ರತಿನಿತ್ಯ ಮಕ್ಕಳಿಂದ 21 ಬಾರಿ ಪಠಿಸಬೇಕು, ಇದರಿಂದ ಮಕ್ಕಳಿಗೆ ವಿದ್ಯಾ, ಬುದ್ಧಿ, ಜ್ಞಾನ, ಪ್ರಾಪ್ತಿಯಾಗು, ಮಕ್ಕಳಲ್ಲಿ ಒಳ್ಳೆಯ ಗುಣಗಳು ಹೆಚ್ಚುವುದು, ಮಕ್ಕಳಲ್ಲಿ ದೈವಿ ಗುಣಗಳು ಹೆಚ್ಚುವುದು ಒಳ್ಳೆಯದು ಕೆಟ್ಟದು ಯಾವುದೆಂಬುದು ಅರಿತು ನಡೆಯುವ ಶಕ್ತಿ ಸಾಮರ್ಥ್ಯ ಈ ನೀಲ ಸರಸ್ವತಿ ಮಂತ್ರದಿಂದ ಪ್ರಾಪ್ತಿಯಾಗುವುದು.
🌺🌺🌺🌺🌺🌺🌺

*ಮೂರನೇ ಮಂತ್ರ ಮೃತ್ಯುಂಜಯ ಮಂತ್ರ*

*3) ಓಂ ಹೌಂ ಜೂಂ ಸಃ ನಮಃ ಶಿವಾಯ ಓಂ*

ಎಂಬ ಮಂತ್ರವನ್ನು ಪ್ರತಿನಿತ್ಯ 21 ಬಾರಿ ಮಕ್ಕಳಿಂದ ಪಠಣೆ ಮಾಡಿಸುವುದರಿಂದ ಮಕ್ಕಳ ಅನಾರೋಗ್ಯ ಸಮಸ್ಯೆ, ಅಪಮೃತ್ಯು ದೋಷಗಳು ಗಂಡಾಂತರ ದೋಷಗಳು, ಗ್ರಹ ದೋಷಗಳು ದೃಷ್ಟಿ ದೋಷಗಳು ನಿವಾರಣೆಯಾಗುವುದು. ಶತ್ರುಗಳು ನಮ್ಮ ಮಕ್ಕಳು ಅಭಿವೃದ್ಧಿ ಹೊಂದಲಿಲ್ಲ ಎಂಬ ಕಾರಣಕ್ಕೆ ತಮ್ಮ ನೆಂಟರು ಅಥವಾ ಬಂದು ಬಳಗದ ಮಕ್ಕಳ ಏಳಿಗೆಯನ್ನು ಸಹಿಸಲಾರದೆ ಅನೇಕ ಮಂತ್ರ ತಂತ್ರ ಕುತಂತ್ರಗಳನ್ನು ಮಾಡುತ್ತಿರುತ್ತಾರೆ, ಇಂತಹ ಶತ್ರುಗಳ, ಅನೇಕ ಪ್ರಯೋಗ ದೋಷಗಳು, ಈ ಮಂತ್ರ ಪಠಣೆಯಿಂದ ನಿವಾರಣೆಯಾಗುವುದು. *ಮೃತ್ಯುಂಜಯನ್ನು ಸ್ವಾಮಿಯು* ರಕ್ಷಾ ಕವಚವಾಗಿ ನಿಮ್ಮ ಮಕ್ಕಳನ್ನು ಕಾಪಾಡುವನು.
🌺🌺🌺🌺🌺🌺🌺

**ನಾಲ್ಕನೇ ಮಂತ್ರ ಕುಲದೇವರ ಮಂತ್ರ*

*4) ಓಂ ಹ್ರೀಂ ಶ್ರೀಂ ಕುಲ ದೇವತಾಯೇ ನಮಃ*

ಈ ಮಂತ್ರವನ್ನು ಪ್ರತಿನಿತ್ಯ 21 ಬಾರಿ ಮಕ್ಕಳಿಂದ ಪಠಣೆ ಮಾಡಿಸುವುದರಿಂದ ಕುಲ ದೇವರ ಅನುಗ್ರಹ ಉಂಟಾಗುವುದು, ದೇಶ ವಿದೇಶಗಳಲ್ಲಿ ವಿದ್ಯಾಭ್ಯಾಸ, ಉದ್ಯೋಗ, ಒಳ್ಳೆಯ ಜಾಗದಲ್ಲಿ ವಿವಾಹ, ವಂಶಾಭಿವೃದ್ಧಿ, ಒಳ್ಳೆಯ ಸ್ಥಾನಮಾನ ಗೌರವ, ಧನ ಧಾನ್ಯ, ಸಮೃದ್ಧಿ ಐಶ್ವರ್ಯ ಭೂಮಿ, ಆಸ್ತಿಯನ್ನು ಪ್ರಾಪ್ತಿಸುವರು ಕುಲದೇವರು ಪೂರ್ವಿಕರ ಮೂಲ ಶಕ್ತಿಯಾಗಿರುತ್ತದೆ, ಕುಲ ದೇವರ ಮಂತ್ರ ಪಠಣೆ ಮಾಡುವುದರಿಂದ ಪೂರ್ವಿಕರ ಶಾಪ ದೋಷಗಳು ನಿವಾರಣೆಯಾಗಿ ನಮಗೆ ಸರ್ವ ಕಾರ್ಯ ಅನುಕೂಲಗಳು ಪ್ರಾಪ್ತಿಯಾಗುವುದು.
🌺🌺🌺🌺🌺🌺🌺

*ಕನಿಷ್ಠಪಕ್ಷ 11 ಬಾರಿ ಈ ನಾಲ್ಕು ಮಂತ್ರಗಳನ್ನು ಪಠಣೆ ಮಾಡಲೇಬೇಕು* ಇಲ್ಲವಾದರೆ ಯಾವುದೇ ಫಲ ಕಾಣಿಸಿಕೊಳ್ಳುವುದಿಲ್ಲ, ಅಮಾವಾಸ್ಯೆ ಗ್ರಹಣ ಕಾಲ ಸಿದ್ದಿ ನಕ್ಷತ್ರಗಳಲ್ಲಿ ಮತ್ತು ಜನ್ಮ ನಕ್ಷತ್ರದಲ್ಲಿ ಈ ಮಂತ್ರಗಳನ್ನು 108 ಬಾರಿ ಜಪ ಮಾಡಬೇಕು ಇದರಿಂದ ಮಂತ್ರಶಕ್ತಿ ಹೆಚ್ಚುವುದು ಮತ್ತು ಮಂತ್ರ ನಿಮ್ಮನ್ನು ಸದಾ ರಕ್ಷಣೆ ಮಾಡಲು ಶಕ್ತಿಯನ್ನು ಹೊಂದುವುದು ಈ ಮಂತ್ರವನ್ನು ಶ್ರದ್ಧೆ ಭಕ್ತಿಗಳಿಂದ ಮಂತ್ರವನ್ನು ಪಠಣೆ ಮಾಡಬೇಕು, ತಂದೆ-ತಾಯಿ ಗುರು ಹಿರಿಯರಿಗೆ ಗೌರವವನ್ನು ಸಲ್ಲಿಸಬೇಕು ಇದರಿಂದ ನಿಮಗೆ ದೈವಾನುಗ್ರಹವಾಗಿ ಇನ್ನು ಹೆಚ್ಚಿನ ಫಲ ಪ್ರಾಪ್ತಿಯಾಗುವುದು ಈ ಮಂತ್ರ ಅದ್ಭುತ ಶಕ್ತಿಯನ್ನು ಹೊಂದಿದ್ದು, ನಿವು ಜೀವನದ ಗುರಿಯನ್ನು ತಲುಪಲು ರಾಮಬಾಣದಂತೆ ಕೆಲಸ ಮಾಡುತ್ತದೆ,

Leave a Reply

Your email address will not be published. Required fields are marked *