ಗದಗ : ತುಂಗಭದ್ರಾ ಆರು ಜಿಲ್ಲೆಯ ಜನರ ಪಾಲಿನ ಜೀವ ನದಿ. ಈಗ ಆ ಜೀವನದಿ ತುಂಗಭದ್ರಾ ನೀರು ಫುಲ್ ಡೇಂಜರ್ ಆಗಿದೆ. ಸರ್ಕಾರಿ ಇಲಾಖೆಗಳು ನೀಡಿರುವ ವರದಿಗಳು ಹೇಳುತ್ತಿದೆ. ಈ ನದಿ ನೀರು ಕುಡಿಯಲು ಯೋಗ್ಯನೇ ಇಲ್ಲ ಎಂದು ಎರಡು ವರದಿಗಳಲ್ಲಿ ಬಹಿರಂಗವಾಗಿದೆ. ಹೀಗಾಗಿ ನೀರು ಕುಡಿಯದಂತೆ ಜಿಲ್ಲಾಡಳಿತ ನದಿ ತೀರದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದೆ.

ತುಂಗಭದ್ರೆಯ ಒಡಲು ಕಲುಷಿತ ಆಗಲು ಕಾರಣ ಅದೊಂದು ಸಕ್ಕರೆ ಕಾರ್ಖಾನೆ ಎನ್ನುವ ದಟ್ಟ ಅನುಮಾನ ರೈತರಲ್ಲಿ ಮೂಡಿದೆ. ಹೀಗಾಗಿ ಆ ಸಕ್ಕರೆ ಕಾರ್ಖನೆಯ ಹರಿದು ಹೋಗುವ ನೀರು ಕೂಡ ತಪಾಸಣೆಗೆ ಕಳಿಸಲಾಗಿದೆ. ಇನ್ನೂ ನದಿ ತೀರದ ಗ್ರಾಮಗಳ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಹಾಲಿನಂತೆ ಹರಿಯುತ್ತಿದ್ದ ತುಂಗಭದ್ರೆ ಈಗ ಸಂಪೂರ್ಣ ಹಸಿರು ಬಣಕ್ಕೆ ತಿರುಗಿ ಹರಿಯುತ್ತಿದ್ದಾಳೆ. ಕಳೆದ 15 ದಿನಗಳಿಂದ ಹಸಿರು ಬಣ್ಣಕ್ಕೆ ತಿರುಗಿದ ನದಿ ನೀರು ನೋಡಿ ನದಿ ತೀರದ ಜನರು ಕಂಗಾಲಾಗಿದ್ದಾರೆ. ಹೊಲ, ಗದ್ದೆಗಳು, ಕುಡಿಯವ ನೀರಿನ ಟ್ಯಾಂಕ್ ಗಳ ಪೈಪ್ ಗಳಲ್ಲೂ ಹಸಿರು ಬಣ್ಣದ ನೀರು ನೋಡಿ ಜನರು ಬೆಚ್ಚಿ ಹೋಗಿದ್ದಾರೆ.

ಇದೆಂಥಾ ನೀರು. ಇದೇ ನೀರು ಹತ್ತಾರು ಹಳ್ಳಿಗೆ ಪೂರೈಕೆ ಆಗಿದೆ. ಈ ನೀರು ಕುಡಿದ ಜನರು ಹೊಟ್ಟೆ ನೋವು, ವಾಂತಿ, ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹದ್ದಿನ ಕಣ್ಣು ಇಟ್ಟಿದ್ದು, ಆರೋಗ್ಯ ಸಮಸ್ಯೆ ಇರೋರಿಗೆ ಚಿಕಿತ್ಸೆ ನೀಡಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರ ಗ್ರಾಮದಿಂದ ಕಳೆಭಾಗದ ನದಿಯಲ್ಲಿ ಮಾತ್ರ ಈ ನದಿ ಹಸಿರು ಬಣ್ಣಕ್ಕೆ ತಿರುಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಗದಗ, ವಿಜಯನಗರ, ಕೊಪ್ಪಳ ಜಿಲ್ಲೆಯ ಹಲವು ಗ್ರಾಮಗಳಿಗೆ ಈ ಹಸಿರು ನದಿಯ ಎಫೆಕ್ಟ್ ಆಗಲಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *