ಭದ್ರಾವತಿ : ದಮ್ಮು, ತಾಕತ್ತು ಇದ್ರೆ ಶಾಸಕ ಬಿ.ಕೆ. ಸಂಗಮೇಶ್ ಅವರ ಮಗನ ಮೇಲೆ ಎಫ್ಐಆರ್ ದಾಖಲು ಮಾಡಲಿ. ಶಾಸಕರ ಮಗನ ಧ್ವನಿಯನ್ನು ಎಫ್ಎಸ್ಎಲ್ ಪರೀಕ್ಷೆ ಮಾಡಿಸಲಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಜ್ಯೋತಿ ಅವರಿಗೆ ಬೆದರಿಕೆ ಹಾಕಿದ ಪ್ರಕರಣದ ವಿರುದ್ದ ಇಂದು ಭದ್ರಾವತಿ ಜೆಡಿಎಸ್ ತಾಲೂಕು ಘಟಕ ಹಾಗೂ ಬಿಜೆಪಿ ಘಟಕ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ”ರಾಮನಗರದಲ್ಲಿ ಧಮ್, ತಾಕತ್ ಬಗ್ಗೆ ಮಾತನಾಡುತ್ತೀರಿ. ಈ ಪ್ರಕರಣದ ಬಗ್ಗೆಯೂ ಎಫ್​ಐಆರ್​ ಹಾಕಿ, ತನಿಖೆ ಮಾಡಿಸಿ” ಎಂದು ಆಗ್ರಹಿಸಿದರು

ಈ ಪ್ರತಿಭಟನೆ ಇಲ್ಲಿಗೆ ಮುಕ್ತಾಯ ಆಗಲ್ಲ, ಇಲ್ಲಿಂದ ಹೊಸ ಅಧ್ಯಾಯ ಶುರುವಾಗಲಿದೆ. ಭದ್ರಾವತಿಯ ನಾಗರೀಕರು ಜಾಗೃತರಾಗಿರಬೇಕು ನಿಮ್ಮ ಜೊತೆ ನಾವಿರುತ್ತೇವೆ” ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಮಹಿಳಾ ಅಧಿಕಾರಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಶಾಸಕರ ಪುತ್ರನನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಭದ್ರಾವತಿ ತಹಸೀಲ್ದಾರ್ ಅವರಿಗೆ ನಿಖಿಲ್ ಕುಮಾರಸ್ವಾಮಿ ಮನವಿ ಸಲ್ಲಿಸಿದರು.

ಭದ್ರಾವತಿಯಲ್ಲಿ ಕಾಂಗ್ರೆಸ್ ಶಾಸಕರ ದೌರ್ಜನ್ಯ ಬಹಳ ದಿನ ನಡೆಯಲ್ಲ. ಅಭಿವೃದ್ದಿಗೆ ಮಿಸಲಿಡಬೇಕಾದ ಸಮಯವನ್ನು ಇಸ್ಪೀಟ್ ದಂಧೆ ಮತ್ತು ಮಾದಕ ವಸ್ತುಗಳ ಪೂರೈಕೆಗೆ ಶಾಸಕರು ಸಮಯ ಮೀಸಲಿಟ್ಟಿದ್ದಾರೆ ಎಂದು ಶಾಸಕ ಸಂಗಮೇಶ್ ವಿರುದ್ಧ ನಿಖಿಲ್ ಅವರು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *