ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸರ್ಕಾರದ ಶಿಕ್ಷಣ ಇಲಾಖೆಯನ್ನು ಬಂದ್ ಮಾಡಿದ್ದಾರೆ. ಅಮೆರಿಕ ಚುನಾವಣೆಯ ಸಮಯದಲ್ಲಿ ಟ್ರಂಪ್ ಅವರು ಶಿಕ್ಷಣ ಇಲಾಖೆಯನ್ನು ಮುಚ್ಚುವುದಾಗಿ ಭರವಸೆ ನೀಡಿದ್ದರು.
ಈ ಭರವಸೆಯಂತೆ ಈಗ ಅವರು ಶಿಕ್ಷಣ ಇಲಾಖೆಯನ್ನು ಮುಚ್ಚುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಟ್ರಂಪ್ ಅವರು ಪುಟಾಣಿ ಮಕ್ಕಳನ್ನು ಕುಳ್ಳಿರಿಸಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
ಶಿಕ್ಷಣ ಇಲಾಖೆ ಬಂದ್ ಮಾಡಿ ಶಾಲಾ ನೀತಿಯನ್ನು ಸಂಪೂರ್ಣವಾಗಿ ರಾಜ್ಯಗಳಿಗೆ ನೀಡುತ್ತೇನೆ ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು. ಈ ಭರವಸೆಯಂತೆ ಶಿಕ್ಷಣ ಇಲಾಖೆಯ ಟ್ರಂಪ್ ಮುಚ್ಚಿದ್ದರಿಂದ ಇನ್ನು ಮುಂದೆ ಶಿಕ್ಷಣದಲ್ಲಿ ಅಮೆರಿಕ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ಸಂಪೂರ್ಣವಾಗಿ ರಾಜ್ಯಗಳಿಗೆ ಅಧಿಕಾರ ಇರಲಿದೆ.
ಶಿಕ್ಷಣ ರಾಜ್ಯಗಳಿಗೆ ಸೇರಬೇಕಿತ್ತು. ನಾವು ಮರಳಿ ಶಿಕ್ಷಣವನ್ನು ರಾಜ್ಯಗಳಿಗೆ ನೀಡಿದ್ದೇವೆ ಎಂದು ಪ್ರಕಟಿಸಿದರು. ಕಳೆದ ವಾರ ಇಲಾಖೆಯು ತನ್ನ ಅರ್ಧದಷ್ಟು ಸಿಬ್ಬಂದಿಯನ್ನು ವಜಾಗೊಳಿಸುವುದಾಗಿ ಟ್ರಂಪ್ ಘೋಷಣೆ ಮಾಡಿದ್ದರು. ಶಿಕ್ಷಣ ಇಲಾಖೆಯು ಅಮೇರಿಕನ್ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ವಿಫಲವಾಗಿದೆ ಎಂದು ತಿಳಿಸಿದೆ.