ಬೀನ್ಸ್, ನುಗ್ಗೆಕಾಯಿ, ಬದನೆಕಾಯಿ, ಕ್ಯಾರೆಟ್​ ಸೇರಿದಂತೆ ಹಲವು ತರಕಾರಿಗಳ ಬೆಲೆ ಹೆಚ್ಚಾಗಿದ್ದು, ಯಾವ ತರಕಾರಿ ಕೇಳಿದ್ರೂ ಎಲ್ಲವೂ 50 ರಿಂದ 100ರೂಪಾಯಿ ಮುಟ್ಟಿದೆ.

Vegetable Price Hike: ಬೆಂಗಳೂರಿನಲ್ಲಿ ಸೊಪ್ಪು, ತರಕಾರಿ ಬೆಲೆ ಏರಿಕೆ; ಗ್ರಾಹಕರು ಶಾಕ್

ತರಕಾರಿ

ಬೆಂಗಳೂರು: ನಗರದ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಏರಿಕೆ ಕಂಡಿದೆ(Vegetable Price Hike). ಬೀನ್ಸ್‌ ಶತಕ ಬಾರಿಸಿದೆ. ನುಗ್ಗೆಕಾಯಿಗೆ ಪೆಟ್ರೋಲ್‌ ರೇಟ್‌(Petrol Rate) ಬಂದಿದೆ. ಬದನೆಕಾಯಿ ಶತಕದ ಬಳಿ ಬಂದು ನಿಂತಿದೆ. ಅಷ್ಟೇ ಅಲ್ಲ ಸೊಪ್ಪು ತರಕಾರಿ ಬೆಲೆಗಳು ಕೂಡಾ ಗಗನ ಮುಟ್ಟಿವೆ. ಅಷ್ಟಕ್ಕೂ ಮಳೆ ತರಕಾರಿ ತರಲು ಮಾರ್ಕೆಟ್‌ಗೆ ಹೋಗಿದ್ದ ಬೆಂಗಳೂರು ಮಂದಿ ಶಾಕ್ ಆಗಿದ್ದಾರೆ.

ತರಕಾರಿಗಳ ತರಹೇವಾರಿ ರೇಟ್‌ಕೇಳಿ ಮಹಿಳೆಯರು ಶಾಕ್‌

ಮಾರ್ಕೆಟ್​​​ಗೆ ಎಂಟ್ರಿ ಕೊಟ್ರೆ ಎದೆ ಬಡಿತ ಹೆಚ್ಚಾಗುತ್ತೆ. ಬೀನ್ಸ್, ನುಗ್ಗೆಕಾಯಿ, ಬದನೆಕಾಯಿ, ಕ್ಯಾರೆಟ್​ ಸೇರಿದಂತೆ ಹಲವು ತರಕಾರಿಗಳ ಬೆಲೆ ಹೆಚ್ಚಾಗಿದ್ದು, ಯಾವ ತರಕಾರಿ ಕೇಳಿದ್ರೂ ಎಲ್ಲವೂ 50 ರಿಂದ 100ರೂಪಾಯಿ ಮುಟ್ಟಿದೆ. ಕೇವಲ ಈರುಳ್ಳಿ ಮಾತ್ರ ಕೈಗೆಟುಕುತ್ತಿದೆ. ತರಕಾರಿಗಳ ಬೆಲೆ ಗಗನಕ್ಕೇರಲು ಕಾರಣವೇ ಮಳೆ ಅಬ್ಬರ. ಕೆಲ ದಿನಗಳ ಹಿಂದೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ಬೆಂಗಳೂರಿನ ಸುತ್ತಮುತ್ತ ಸುರಿದ ಮಳೆಯಿಂದ ತರಕಾರಿ ಬೆಳೆಗಳಿಗೆ ಹಾನಿಯಾಗಿತ್ತು. ಹೀಗಾಗಿ ಇಳುವರಿ ಕಡಿಮೆಯಾಗಿದ್ದು ರಾಜಧಾನಿಗೆ ಪೂರೈಕೆಯಾಗುವ ತರಕಾರಿಗಳ ಬೆಲೆ ಹೆಚ್ಚಾಗಿವೆ. ಕಲಾಸಿಪಾಳ್ಯ, ಕೆ.ಆರ್‌.ಮಾರುಕಟ್ಟೆ ಅಷ್ಟೇ ಅಲ್ಲ, ಹಾಪ್‌ ಕಾಮ್ಸ್‌ನಲ್ಲೂ ಕೆಲ ತರಕಾರಿಗಳ ಬೆಲೆ ನೂರರ ಗಡಿ ದಾಟಿದೆ.

ಗಗನ ಮುಟ್ಟಿದ ತರಕಾರಿ ರೇಟ್‌

ಒಂದು ಕೆಜಿ ಬೀನ್ಸ್‌ ಹಿಂದೆ 40 ರಿಂದ 50 ರೂಪಾಯಿಗೆ ಸಿಗ್ತಿತ್ತು. ಸದ್ಯ 100 ರ ಗಡಿದಾಟಿದೆ. ಅದ್ರಂತೆ 30 ರೂಪಾಯಿಗೆ ಸಿಗ್ತಿದ್ದ ಮೈಸೂರು ಬದನೆ ಈಗ 60 ರಿಂದ 80 ರೂಪಾಯಿ ಆಗಿದೆ. ಕ್ಯಾರೆಟ್‌ 30 ರಿಂದ 60 ಕ್ಕೆ ಜಿಗಿದಿದೆ. ನುಗ್ಗಿಕಾಯಿಯಂತೂ 40 ರೂಪಾಯಿ ಇದ್ದಿದ್ದು 100 ರೂಪಾಯಿ ತಲುಪಿದೆ. ತರಕಾರಿ ಮಾತ್ರವಲ್ಲ ಕೊತ್ತಂಬರಿ, ಮೆಂತ್ಯೆ, ಪಾಲಕ್‌ ಸೇರಿದಂತೆ ಸೊಪ್ಪಿನ ದರಗಳು ಕೂಡಾ ಹೆಚ್ಚಾಗಿವೆ. ಒಟ್ನಲ್ಲಿ ಕಳೆದ ವಾರಕ್ಕೆ ಹೋಲಿಸಿದ್ರೆ, ಈ ವಾರ ಶೇಕಡಾ 10 ರಿಂದ 25 ರಷ್ಟು ತರಕಾರಿಗಳ ದರ ದುಪ್ಪಟ್ಟು ಆಗಿದೆ.

Leave a Reply

Your email address will not be published. Required fields are marked *