ಕೋಚಿಮುಲ್ ಅಧ್ಯಕ್ಷರಾದ ಮಾಲೂರು ಶಾಸಕ ಕೆ ವೈ ನಂಜೇಗೌಡ ನಗರದ ಹೊರವಲಯದ ಮೆಗಾ ಡೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿಅಧಿಕಾರಿಗಳ ಸಭೆ ನಡೆಸಿದ ನಂತರ ಕೋಚಿಮುಲ್ ವಿಭಜನೆ,ಮೆಗಾ ಡೈರಿಯಲ್ಲಿ ಪ್ಯಾಕಿಂಗ್ ಘಟಕದ ನಿರ್ಮಾಣ,ಸೋಲಾರ್ ಘಟಕದ ಕಾಮಗಾರಿ ಸೇರಿ ಹಲವು ಮಹತ್ವದ ವಿಚಾರಗಳ ಬಗ್ಗೆ ತಿಳಿಸಿದ್ದಾರೆ,
ಇನ್ನು ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋಚಿಮುಲ್ ವಿಭಜಿಸಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟವನ್ನು ರಚಿಸಿದ ನಂತರವೇ ಕೋಚಿಮುಲ್ ಆಡಳಿತ ಮಂಡಳಿಗೆ ಚುನಾವಣೆ ನಡೆಸಲಾಗುತ್ತದೆ,
ಹಿಂದಿನ ಬಿಜೆಪಿ ಸರ್ಕಾರ ಅತುರವಾಗಿ ಕೋಚಿಮುಲ್ ವಿಭಜನೆಗೆ ಅವೈಜ್ಞಾನಿಕವಾಗಿ ನಿರ್ಧಾರ ಕೈಗೊಂಡಿತ್ತು ಅದಕ್ಕಾಗಿ ಕೋರ್ಟ್ ಮೆಟ್ಟಿಲೇರಬೇಕಾಯಿತು ಈಗ ರಾಜ್ಯ ಕಾಂಗ್ರೆಸ್ ಸರ್ಕಾರ ಕೋಚಿಮುಲ್ ಹಾಲು ಒಕ್ಕೂಟ ವಿಭಜನೆಗೆ ಪರವಾಗಿದೆ ಆದಷ್ಟು ಬೇಗ ಚಿಕ್ಕಬಳ್ಳಾಪುರ ಪ್ರತ್ಯೇಕ ಹಾಲು ಒಕ್ಕೂಟ ಅಸ್ತಿತ್ವಕ್ಕೆ ಬರಲಿದೆ ಎಂದರು.
ಇನ್ನು ಮೆಗಾ ಡೇರಿಯಲ್ಲಿ ಹಾಲಿನ ಪ್ಯಾಕಿಂಗ್ ಘಟಕ ನಿರ್ಮಾಣಕ್ಕೆ ಹತ್ತು ಎಕರೆ ಜಾಗ ಅಗತ್ಯವಿದ್ದು ಮೆಗಾ ಡೇರಿ ಪಕ್ಕದಲ್ಲಿರುವ ತೋಟಗಾರಿಕೆ ಇಲಾಖೆಗೆ ಸೇರಿದ ಹತ್ತು ಎಕರೆ ಜಾಗ ಇದ್ದು ಡಿಪಿಆರ್ ರೊಪಿಸಲಾಗಿದ್ದು ಹೆಸರಿಗೆ ಬಂದ ತಕ್ಷಣವೇ ಪ್ಯಾಕಿಂಗ್ ಘಟಕ ನಿರ್ಮಾಣ ಕೆಲಸ ಆರಂಭವಾಗಲಿದೆ ಎಂದರು.
ಇನ್ನು ಜಿಲ್ಲೆಯ ಚಿಂತಾಮಣಿಯಲ್ಲಿ 55ಕೋಟಿ ವೆಚ್ಚದಲ್ಲಿ ಹತ್ತು ಸಾವಿರ ಲೀಟರ್ ಉತ್ಪಾದನಾ ಸಾಮರ್ಥ್ಯದ ಐಸ್‌ಕ್ರೀಂ ಘಟಕ ಕಾಮಗಾರಿ ನಡೆಯುತ್ತಿದೆ ಕಾಮಗಾರಿ ಮುಂದಿನ ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಹೊಳಲಿ ಬಳಿ ಐವತ್ತು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಘಟಕದ ಕಾಮಗಾರಿ 75 ರಷ್ಟು ಮುಗಿದಿದ್ದು ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಇದು ಲೋಕಾರ್ಪಣೆಗೊಂಡರೆ ಪ್ರತಿ ತಿಂಗಳು ಎರಡು ಕೋಟಿ ವಿದ್ಯುತ್ ಬಿಲ್ ಉಳಿತಾಯವಾಗಲಿದೆ ಎಂದು ಮಾಹಿತಿ ನೀಡಿದರು