Odisha Train Accident : ಒಡಿಶಾ ರೈಲು ಅಪಘಾತದಲ್ಲಿ ತನ್ನ ತಾಯಿ ತೀರಿ ಹೋಗಿದ್ದಾರೆ, ಪರಿಹಾರದ ಬದಲಾಗಿ ತನಗೆ ಉದ್ಯೋಗ ನೀಡಬೇಕೆಂದು ಕೇಂದ್ರ ರೈಲ್ವೆ ಸಚಿವರನ್ನು ಕಾಣಲು ಪಾಟ್ನಾದ ಈ ವ್ಯಕ್ತಿ ಬಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಟ್ನಾದ ಸಂಜಯ್ ಕುಮಾರ್
Government Job: ಸರ್ಕಾರಿ ನೌಕರಿಯನ್ನು ಗಿಟ್ಟಿಸಲು ವ್ಯಕ್ತಿಯೊಬ್ಬ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ಪ್ರಸಂಗ ದೆಹಲಿಯಲ್ಲಿ ನಡೆದಿದೆ. ಇತ್ತೀಚೆಗೆ ಸಂಭವಿಸಿದ ಒಡಿಶಾ ರೈಲು ಅಪಘಾತದಲ್ಲಿ ತನ್ನ ತಾಯಿ ತೀರಿ ಹೋಗಿದ್ದಾರೆಂದು ಇವನು ಅಧಿಕಾರಿಗಳಿಗೆ ಸುಳ್ಳು ಹೇಳಿದ್ದಾನೆ. ಬಾಲ್ಸೋರ್ ರೈಲು ಅಪಘಾತದ ನಂತರ ಸರ್ಕಾರಿ ಉದ್ಯೋಗ ಪಡೆಯುವ ಉದ್ದೇಶದಿಂದ ತಾನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಅವರನ್ನು ಭೇಟಿ ಮಾಡಲು ದೆಹಲಿಗೆ ಪ್ರಯಾಣಿಸಿದ್ಧಾಗಿ ತಿಳಿಸಿದ್ದಾನೆ. ಈ ಸಂದರ್ಭದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಅವನ ತಾಯಿ 2018ರಲ್ಲಿಯೇ ನಿಧನ ಹೊಂದಿದ್ದರ ಮಾಹಿತಿ ಬೆಳಕಿಗೆ ಬಂದಿದೆ. ತತ್ಪರಿಣಾಮವಾಗಿ ಪೊಲೀಸರು ಅವನನ್ನು ಬಂಧಿಸಿದ್ದಾರೆ.
ಈ ವ್ಯಕ್ತಿಯನ್ನು ಪಾಟ್ನಾದ ಸಂಜಯ್ ಕುಮಾರ್ ಎಂದು ಗುರುತಿಲಾಗಿದೆ. ಇವನು ಗುರುವಾರದಂದು ಸಚಿವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾನೆ. ಆಗ ರೈಲು ಭವನದಲ್ಲಿ ಅವರನ್ನು ಕಾಣಲು ತಿಳಿಸಲಾಗಿದೆ. ಆ ಪ್ರಕಾರ ಅವನು ಸಚಿವರ ಕಚೇರಿಗೆ ತೆರಳಿದ್ಧಾನೆ. ಅಲ್ಲಿ ಅಧಿಕಾರಿಗಳೊಂದಿಗೆ ಮಾತನಾಡುವಾಗ ಅವನ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ.