ಕಂತೆ ಕಂತೆ ನೋಟುಗಳ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು, ಹೆಂಡತಿ ಮಕ್ಕಳ ಸೆಲ್ಫಿ ಪೊಲೀಸ್ ಅಧಿಕಾರಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.
ಉತ್ತರ ಪ್ರದೇಶ : ಉನ್ನಾವೋ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರ ಹೆಂಡತಿ ಮತ್ತು ಮಕ್ಕಳು 500ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ರಾಶಿ ಹಾಕಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗಾ ಈ ಫೋಟೋಗಳು ಎಲ್ಲೆಡೆ ಆಗಿದ್ದು, ಹೆಂಡತಿ ಮಕ್ಕಳ ಸೆಲ್ಫಿ ಪೊಲೀಸ್ ಅಧಿಕಾರಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಪೊಲೀಸ್ ಅಧಿಕಾರಿಯ ಮನೆಯಲ್ಲಿ ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಎಂದು ಕಾಮೆಂಟ್ ಮೂಲಕ ಪ್ರಶ್ನಿಸಲು ತೊಡಗಿದ್ದಾರೆ.
ಅಷ್ಟೊಂದು ನಗದು ಕಂಡು ಬಂದಿರುವುದು ಬೆಹ್ತಾ ಮುಜಾವರ್ ಪೊಲೀಸ್ ಠಾಣೆಯ ಎಸ್ಎಚ್ಒ ರಮೇಶ್ ಚಂದ್ರ ಸಹಾನಿ ಅವರ ಮನೆಯಲ್ಲಿ ಎಂದು ತಿಳಿದುಬಂದಿದೆ. ಈ ಕುರಿತು ರಮೇಶ್ ಚಂದ್ರ ವಿರುದ್ಧ ಈಗಾಗಲೇ ತನಿಖೆ ಆರಂಭಿಸಲಾಗಿದೆ. 500 ರೂ ಮುಖ ಬೆಲೆಯ 27 ಕಂತೆಗಳು ಅಂದರೆ ಸುಮಾರು 14 ಲಕ್ಷ ರೂ ಇರುವುದು ತಿಳಿದುಬಂದಿದೆ.