ಕೆಲವು ವರ್ಷಗಳ ಹಿಂದೆ ಮದುವೆ ಅಂದರೇ ಒಂದು ದೊಡ್ಡ ಹಬ್ಬದಂತೆ ಸಂಭ್ರಮದಿಂದ ಸಾಂಪ್ರದಾಯಕವಾಗಿ ಮಾಡುತ್ತಿದ್ದರು. ಮನೆಯವರೆಲ್ಲ ಸೇರಿ ವಾರಗಟ್ಟಲೇ, ತಿಂಗಳುಗಟ್ಟಲೇ ಮದುವೆ ಸಂಭ್ರಮದಲ್ಲಿ ಭಾಗಿಯಾಗ್ತಿದ್ರು. ಆದರೆ ಇತ್ತೀಚಿಗೆ ಆ ದಿನಗಳು ಕಣ್ಮರೆಯಾಗಿ ಪಾಶ್ಚಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ನಮ್ಮ ಸಾಂಪ್ರದಾಯಕ ಸಂಸ್ಕೃತಿಯನ್ನು ಮರೆಯುತ್ತಿರುವುದು ಬೇಸರದ ಸಂಗತಿ. ಬಹುತೇಕ ಎಲ್ಲರೂ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ ಅಂತಲೇ ಎನ್ನಬಹುದು. ಇತ್ತೀಚಿಗಂತೂ ಮದುವೆ ಫಿಕ್ಸ್ ಆದ್ರೆ ಸಾಕು ಪ್ರೀ ವೆಡ್ಡಿಂಗ್ ಫೋಟೋಶೂಟ್, ಪೋಸ್ಟ್ ವೆಡ್ಡಿಂಗ್ ಅಂತೆಲ್ಲ ಶುರುವಾಗಿದೆ. ಆದರೆ ಇದೀಗ ಹೊಸ ಜೋಡಿಯೊಂದು ಮತ್ತೊಂದು ಟ್ರೆಂಡ್ ಕ್ರಿಯೆಟ್ ಮಾಡಲು ಮುಂದಾಗಿದ್ದಾರೆ. ಹೌದು ಇಲ್ಲೊಂದು ನವವಿವಾಹಿತ ಜೋಡಿ ಪ್ರೀ ಫಸ್ಟ್ ನೈಟ್ ಪೊಟೋಶೂಟ್ ಮಾಡಿಸಿದ್ದು, ಇದೀಗ ಆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಈಗಿನ ಮದುವೆಗಳು ಹೆಚ್ಚಾಗಿ ಪಾಶ್ಚತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿವೆ ಎನ್ನುವುದಂತೂ ನಿಜಕ್ಕೂ ಸತ್ಯದ ಸಂಗತಿ ಎನ್ನಲಾಗುತ್ತಿದೆ. ಮದುವೆಗೂ ಮುಂಚೆಯೇ ಜೋಡಿಗಳು ತೆರೆಮರೆಯಲ್ಲಿ ಎಲ್ಲವನ್ನೂ ಮುಗಿಸಿಬಿಡುತ್ತಾರೆ ಜೊತೆಗೆ ಪ್ರೀ ವೆಡ್ಡಿಂಗ್ ಪೋಸ್ಟ್ ವೆಡ್ಡಿಂಗ್ ಎಂಬ ಹೊಸ ಟ್ರೆಂಡ್ ಸಹ ಶುರು ಮಾಡಿದ್ದಾರೆ. ಇನ್ನೂ ಪ್ರೀ ವೆಡ್ಡಿಂಗ್ ಅನ್ನೋ ಹುಚ್ಚುತನಕ್ಕೆ ಎಂತಹ ವಿಡಿಯೋಗಳು ಬಂದಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದು‌ ಎಲ್ಲರಿಗೂ ತಿಳಿದಿದೆ, ಕೆಲವೊಂದು ಫೋಟೋಶೂಟ್ ಗಳು ಜನರ ಮೆಚ್ಚುಗೆಗೆ ಪಾತ್ರವಾಗಿದ್ದರೇ, ಕೆಲವಂತೂ ಎಲ್ಲರ ಆಕ್ರೋಷಕ್ಕೆ ಗುರಿಯಾಗಿದೆ. ಕೊಚ್ಚೆ ನೀರಲ್ಲಿ, ಕೆಸರಿನಲ್ಲಿ, ಮೋರಿಗಳಲ್ಲಿ ಪರಸ್ಪರ ತಬ್ಬಿಕ್ಕೊಂಡು ನಂತರ ಮರಗಳನ್ನೇರಿ ಪೊಟೋಶೂಟ್ ಮಾಡಿಸಿಕೊಂಡು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಇದೀಗ ಒಂದು ಜೋಡಿ ಅದೇ ರೀತಿಯಾಗಿ ಮತ್ತೊಂದು ಟ್ರೆಂಡ್ ಕ್ರಿಯೇಟ್ ಮಾಡಲು ಮುಂದಾಗಿದೆ

ಫೋಟೋ ಶೂಟ್ ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಪೋಟೋಶೂಟ್ಸ್ ಜೊತೆಗೆ ಫಸ್ಟ್ ನೈಟ್ ಪ್ರೀ ಶೂಟ್ ಸಹ ಶುರುವಾಗಿದೆ. ಹೌದು ಇಲ್ಲೊಂದು ಜೋಡಿ ಈ ರೀತಿಯಾದ ಕೆಲಸ ಮಾಡಿದೆ. ಈ ಸಂಬಂಧ ವಿಡಿಯೋ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋ ಪ್ರಕಾರ ಜೋಡಿಯೊಂದು ಮದುವೆಗೆ ಮುಂಚೆಯೆ ಪ್ರಿ ಫಸ್ಟ್ ನೈಟ್ ಪ್ಲಾನ್ ಮಾಡಿದೆ. ಫಸ್ಟ್ ನೈಟ್ ದಿನ ಏನಾಗುತ್ತದೆ ಎಂಬುದನ್ನು ಹೇಳುತ್ತಾ ಈ ವಿಡಿಯೋ ಶೂಟ್ ಮಾಡಲಾಗಿದೆ. ವರ ಹಾಗೂ ವದು ಸಂಪ್ರದಾಯ ವಸ್ತ್ರಗಳನ್ನು ಧರಿಸಿ ಕೈಯಲ್ಲಿ ಹಾಲಿನ ಲೋಟವನ್ನು ಹಿಡಿದು ಕೋಣೆಯೊಳಗೆ ಹೋಗುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಕೋಣೆಯನ್ನು ಫಸ್ಟ್ ನೈಟ್ ಮಾದರಿ ಅಲಂಕಾರ ಮಾಡಿರುವುದನ್ನು ಸಹ ನೀವು ನೋಡಬಹುದು. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಜೊತೆಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *