ರಾಮನಗರ : ಕಣ್ವ ಜಲಾಶಯದಲ್ಲಿ ಜಲಸಾಹಸ ಕ್ರೀಡೆ ಆರಂಭಕ್ಕೆ ಸಿದ್ಧತೆ ನಡೆಸಿರುವ ಹಿನ್ನೆಲೆ ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಪತ್ನಿಯೊಂದಿಗೆ ವಾಟರ್ ಬೈಕ್ ನಡೆಸುವ ಮೂಲಕ ಕಾಲಕಳೆದಿದ್ದಾರೆ.
ಕಣ್ವ ಜಲಾಶಯದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಜಲಸಾಹಸ ಕ್ರೀಡೆ ಆರಂಭಕ್ಕೆ ಸಿದ್ಧತೆ ನಡೆಸಲಾಗಿದ್ದು, ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ನೆನ್ನೆ ಸಿ.ಪಿ.ಯೋಗೇಶ್ವರ್ ಪತ್ನಿಯೊಂದಿಗೆ ಆಗಮಿಸಿ ವಾಟರ್ ಬೈಕ್ ರೈಡ್ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಸ್ವತಃ ಪತ್ನಿಯೊಂದಿಗೆ ಬೈಕ್ ರೈಡ್ ಮಾಡಿದ ಎಂಜಾಯ್ ಮಾಡಿದ್ದಾರೆ ಎನ್ನಲಾಗಿದೆ.