ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾವಿರಾರು ಕ್ಯೂಸೆಕ್ ನೀರು ವ್ಯರ್ಥವಾಗಿ ಹೋಗಿರುವ ಘಟನೆ, ಹಳೆ ಮೈಸೂರು ಭಾಗದ ಜೀವನಾಡಿ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ ನಡೆದಿರುವುದು ದುರಂತವಾಗಿದೆ.
ಭಾನುವಾರ ರಾತ್ರಿ ಅನಿರೀಕ್ಷಿತವಾಗಿ ಕೆಆರ್‌ಎಸ್ ಡ್ಯಾಂನ +80 ಗೇಟ್ ತೆರೆದಿದ್ದು, ಅದರ ಮೂಲಕ ನದಿಗೆ ನೀರು ಹರಿದು ಹಾಳಾಗಿದೆ. ಗೇಟ್ ತೆರೆದಿದ್ದರೂ, ಅಧಿಕಾರಿಗಳು ಅವುಗಳನ್ನು ತಕ್ಷಣ ಮುಚ್ಚದೇ ನಿರ್ಲಕ್ಷ್ಯ ಪ್ರದರ್ಶಿಸಿದ್ದಾರೆ. ಈ ಅವ್ಯವಸ್ಥೆಯಿಂದ ಸೋಮವಾರ ರಾತ್ರಿಯವರೆಗೂ ಡ್ಯಾಂನಿಂದ ನೀರು ನದಿಗೆ ಹರಿದು ಹೋದಂತೆ ವರದಿಯಾಗಿದೆ.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸುಮಾರು 2,000 ಕ್ಯೂಸೆಕ್ ನೀರು ನದಿ ಪಾಲಾಗಿದೆ. ಗೇಟ್ ಯಾಕೆ ಮತ್ತು ಹೇಗೆ ತೆರೆದಿತು ಎಂಬುದಕ್ಕೆ ಯಾವುದೇ ಸ್ಪಷ್ಟ ಸ್ಪಷ್ಠತೆ ಇಲ್ಲ. ಈ ಬಗ್ಗೆ ರೈತರಲ್ಲಿ ಅನೇಕ ಅನುಮಾನಗಳು ಮೂಡಿವೆ. ಸಿಬ್ಬಂದಿಯ ಯಡವಟ್ಟಿನಿಂದ ಗೇಟ್ ತೆರೆದಿದೆಯೆ? ಅಥವಾ ತಾಂತ್ರಿಕ ಸಮಸ್ಯೆಯಿಂದ ಇದಾಗಿದೆ ಎಂಬುದಾದರೂ ಸ್ಪಷ್ಟವಿಲ್ಲ.
ಅವಶ್ಯಕತಾ ಕ್ರಮಗಳನ್ನು ಕೈಗೊಂಡು, ಸೋಮವಾರ ರಾತ್ರಿ ಅಧಿಕಾರಿಗಳು ಗೇಟ್ ಅನ್ನು ಮುಚ್ಚಲು ಕಾರ್ಯಾಚರಣೆ ನಡೆಸಿದರು. ಆದರೆ, ಡ್ಯಾಂನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ನೀರು ಉಳಿದಿದ್ದು, ಗೇಟ್ ಮುಚ್ಚಲು ಹೆಚ್ಚು ಹೋರಾಟ ಮತ್ತು ಕಷ್ಟವಾಯಿತು ಎಂದು ಹೇಳಲಾಗಿದೆ.