ವಯನಾಡಿನ ಭೂಕುಸಿತಕ್ಕೆ ಒಳಗಾದ ಹಳ್ಳಿಯೊಂದರಲ್ಲಿ ಸುಧಾರಿತ ರಾಡಾರ್ ವ್ಯವಸ್ಥೆಯೊಂದಿಗೆ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿರುವ ರಕ್ಷಕರು ಉಸಿರಾಟವನ್ನು ಸೂಚಿಸುವ ಸಂಕೇತವನ್ನು ಪತ್ತೆಹಚ್ಚಿದ್ದಾರೆ, ಬಹುಶಃ ಮನುಷ್ಯ ಅಥವಾ ಪ್ರಾಣಿಯ ಉಸಿರಾಟವೆಂಬುದು ಮಾತ್ರ ತಿಳಿದುಬಂದಿಲ್ಲ.
ತೀವ್ರ ಹಾನಿಗೊಳಗಾದ ಮುಂಡಕ್ಕೈ ಗ್ರಾಮದಲ್ಲಿ ಈ ಹಿಂದೆ ಮನೆ ಇದ್ದ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದಾಗ ರಾಡಾರ್‌ನಲ್ಲಿ ‘ಬ್ಲೂ ಸಿಗ್ನಲ್’ ಬಂದಿತ್ತು ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಉಸಿರಾಟದ ಸ್ಥಿರ ಸಂಕೇತವಿದೆ” ಎಂದು ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದರು.
ಕಟ್ಟಡದ ಅವಶೇಷಗಳನ್ನು ಮಣ್ಣಿನಿಂದ ಸುಮಾರು ಎರಡು-ಮೂರು ಮೀಟರ್ ಕೆಳಗೆ ಹೂಳಲಾಗಿತ್ತು ಮತ್ತು ಉಸಿರಾಟದ ಸಂಕೇತವು ಕಂಡು ಬಂದಿದ್ದು ಆದ್ರೆ ಆ ಸಂಕೇತವು ಮಾನವ ಅಥವಾ ಪ್ರಾಣಿಯಿಂದ ಬಂದಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದರು.
ಸ್ಥಳೀಯ ನಿವಾಸಿಗಳ ಪ್ರಕಾರ, ಮನೆಯ ಅಡುಗೆ ಕೋಣೆ ಮತ್ತು ಸ್ಟೋರ್ ರೂಂ ಇರುವ ಪ್ರದೇಶದಲ್ಲಿ ಸಿಗ್ನಲ್ ಪತ್ತೆಯಾಗಿದೆ. ಸಿಗ್ನಲ್ ಆಧರಿಸಿ, ರಕ್ಷಕರು ಆ ಸ್ಥಳವನ್ನು ಅಗೆಯಲು ಪ್ರಾರಂಭಿಸಿದ್ದಾರೆ. ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದ ನಂತರ ನಾಲ್ಕನೇ ದಿನ ಶೋಧ ಕಾರ್ಯಾಚರಣೆಯಲ್ಲಿ ನಾಲ್ವರು ಜೀವಂತವಾಗಿ ಪತ್ತೆಯಾಗಿದ್ದು ವೆಳ್ಳರಿಮಲ ನಿವಾಸಿಗಳಾದ ಜಾನ್ ಕೆಜೆ, ಜೋಮೊಲ್ ಜಾನ್, ಕ್ರಿಸ್ಟೀನ್ ಜಾನ್ ಮತ್ತು ಅಬ್ರಹಾಂ ಜಾನ್ ಅವರನ್ನು ರಕ್ಷಿಸಲಾಗಿದೆ ಮತ್ತು ಸುರಕ್ಷಿತ ಮಾರ್ಗದ ಮೂಲಕ ಹತ್ತಿರದ ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ
ಮೊದಲು, ಕುಟುಂಬವನ್ನು ವಿಮಾನದಲ್ಲಿ ಸಾಗಿಸಲು ಯೋಜಿಸಲಾಗಿತ್ತು ಆದರೆ ನಂತರ ಸುರಕ್ಷಿತ ಮಾರ್ಗವನ್ನು ಗುರುತಿಸಲಾಯಿತು ಎಂದು ಮೂಲಗಳಿಂದ ತಿಳಿದು ಬಂದಿದೆ.ಮಂಗಳವಾರದಿಂದ ಕುಟುಂಬವು ಮನೆಯಲ್ಲಿ ಸಿಲುಕಿಕೊಂಡಿದೆ. “ಅವರು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿದ್ದಾರೆ, ಆದರೆ ಘಟನೆಯ ನಂತರ ಭಯಭೀತರಾಗಿದ್ದಾರೆ” ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡ ಸೇರಿದಂತೆ ರಕ್ಷಕರು ತಮ್ಮ ನಿವಾಸದಿಂದ ಶಿಬಿರಕ್ಕೆ ಸುರಕ್ಷಿತ ಮಾರ್ಗದ ಭರವಸೆ ನೀಡಿದ ನಂತರ ಕುಟುಂಬವು ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲು ಒಪ್ಪಿಕೊಂಡಿದೆ ಅಲ್ಲದೇ ಸಾವಿನ ಸಂಖ್ಯೆ 308 ಕ್ಕೆ ಏರಿದೆ. ಆದಾಗ್ಯೂ, ಅಧಿಕೃತ ಎಣಿಕೆ 201 ರಷ್ಟಿದೆ. ಸುಮಾರು 300 ಜನರು ಇನ್ನೂ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮೂಲಗಳಿಂದ
ಈ ಪ್ರದೇಶದಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಲ್ಲಿ ಸುಮಾರು 300 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಕೇರಳ ಎಡಿಜಿಪಿ ಎಂಆರ್ ಅಜಿತ್ ಕುಮಾರ್ ಶುಕ್ರವಾರ ಹೇಳಿದ್ದಾರೆ. ಭೂಕುಸಿತದಿಂದ 348 ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.