ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂಡ್ ಗಮನದಲ್ಲಿದೆ. ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವಾಗ ಹಾಲಿ ಅಧ್ಯಕ್ಷರು ಲೋಕಸಭೆ ಚುನಾವಣೆವರೆಗೂ ಇರ್ತಾರೆ ಎಂದು ನಮ್ಮ ಹೈಕಮಾಂಡ್ ನಾಯಕರು ಹೇಳಿದ್ದರು. ಈಗ ಲೋಕಸಭೆ ಚುನಾವಣೆ ಅಂತ್ಯವಾಗಿರುವ ಹಿನ್ನೆಲೆ ಕಾರ್ಯಕರ್ತರಲ್ಲಿ ಪ್ರಶ್ನೆ ಇದೆ ಎಂದರು.
ಅಧ್ಯಕ್ಷರನ್ನು ಬದಲಾವಣೆ ಮಾಡಿ ಎಂದು ನಾವು ಒತ್ತಾಯ ಮಾಡಿಲ್ಲ. ಆದರೆ ಕಾರ್ಯಕರ್ತರ ಗೊಂದಲ ಬಗೆಹರಿಸಬೇಕು. ಡಿ.ಕೆ ಶಿವಕುಮಾರ್ ಅವರು ಮುಂದುವರಿಯುವುದರಲ್ಲಿ ಅಭ್ಯಂತರ ಇಲ್ಲ. ಎಐಸಿಸಿ ನಾಯಕರು ಕೆಪಿಸಿಸಿ ಅಧ್ಯಕ್ಷ ಆಗು ಎಂದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧ್ಯಕ್ಷ ಆಗುತ್ತೇನೆ. ಪಕ್ಷದ ನಿಯಮಗಳ ಪ್ರಕಾರ ಒಬ್ಬರು ಎರಡು ಹುದ್ದೆ ನಿಭಾಯಿಸಬಾರದು ಎಂದರು.
ಸಿಎಂ, ಸಿದ್ದರಾಮಯ್ಯ ಪೂರ್ಣಾವಧಿ ಬಗ್ಗೆ ಸಚಿವರ ಹೇಳಿಕೆ ವಿಚಾರಕ್ಕೆ ಮಾತನಾಡಿ, ಯಾರು ಎಷ್ಟು ವರ್ಷ ಇರ್ತಾರೆ, ಅಂತಿಮ ನಿರ್ಧಾರ ಹೈಕಮಾಂಡ್‌ನದ್ದು, ದೇವರಾಜು ಅರಸು ಸಿಎಂ ಆದಾಗ ವಿಧಾನಸಭೆ ಸದಸ್ಯರು ಅಲ್ಲ, ಸಾಕಷ್ಟು ಜನರು ಸಿಎಂ ಹುದ್ದೆಯ ಸ್ಪರ್ಧೆಯಲ್ಲಿದ್ದರು, ಅದಾಗ್ಯೂ ಅರಸು ಅವರನ್ನು ಸಿಎಂ ಮಾಡಲಾಯಿತು. ಶಾಸಕರ ಅಭಿಪ್ರಾಯ ಕಡೆಗಣಿಸಿ ಹೈಕಮಾಂಡ್ ತೀರ್ಮಾನ ಮಾಡಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದರು.
ಹಾಸನ ಉಸ್ತುವಾರಿಯಿಂದ ನನ್ನ ಬಿಡುಗಡೆ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದೇನೆ. ನನ್ನ ಜಿಲ್ಲೆ ತುಮಕೂರಿನಲ್ಲಿ ಪಕ್ಷ ಸಂಘಟನೆ ಮಾಡುವ ದೃಷ್ಟಿಯಿಂದ ಬಿಡುಗಡೆ ಕೋರಿದ್ದೇನೆ. ಅವಕಾಶ ನೀಡಿದ್ದಕ್ಕೆ ನನ್ನ ಕೃತ್ಯಜ್ಞತೆ ಇದೆ. ಬೆಳಗಾವಿ ಬಳಿಕ ತುಮಕೂರು ದೊಡ್ಡ ಜಿಲ್ಲೆ ಹೀಗಾಗಿ ಜಿಲ್ಲೆಯಲ್ಲಿ ಸಂಘಟನೆ ಮಾಡಬೇಕಿದೆ. ಇದರ ಬದಲಿಗೆ ನಾನು ತುಮಕೂರು ಅಲ್ಲ, ಯಾವ ಜಿಲ್ಲೆಯ ಉಸ್ತುವಾರಿ ಕೊಡಿ ಎಂದು ಕೇಳಿಲ್ಲ, ಹಾಸನದಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕಿತ್ತು ಅದನ್ನು ಮಾಡಿದೆ. ಹೀಗಾಗಿ ಬಿಡುಗಡೆ ಕೋರಿ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ ಎಂದರು.