ವಾಷಿಂಗ್ಟನ್ :‌ ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ಹಿಂದಿನ ಜೋ ಬೈಡನ್‌ ಸರ್ಕಾರವು ಯುಎಸ್‌ಏಡ್‌ ನೆಪದಲ್ಲಿ 180 ಕೋಟಿ ರೂ. ನೀಡಿತ್ತು ಎಂಬ ಆರೋಪ ಭಾರೀ ಕೋಲಾಹಲ ಎಬ್ಬಿಸಿದೆ. ಈ ನಡುವೆ ಭಾರತ ಮತ್ತು ಚೀನಾದಂತಹ ದೇಶಗಳ ಮೇಲೆ ಅಮೆರಿಕ ಸುಂಕ ವಿಧಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುನರುಚ್ಚರಿಸಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಬಳಿಕ ಟ್ರಂಪ್‌ ಈ ಕುರಿತು ಮಾತುಕತೆ ನಡೆಸಿದ್ದರು. ಅಲ್ಲದೇ ಮೋದಿ ಸಮ್ಮುಖದಲ್ಲೇ ಸುಂಕ ವಿಧಿಸುವ ಮಾತುಗಳನ್ನಾಡಿದರು. ಇದೀಗ ಮತ್ತೊಮ್ಮೆ ಅದೇ ಮಾತುಗನ್ನ ಪುನರುಚ್ಚರಿಸಿದ್ದಾರೆ.

ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್, ಶೀಘ್ರದಲ್ಲೇ ಸುಂಕ ವಿಧಿಸುತ್ತೇವೆ. ಅವರೂ ನಮಗೆ ಸುಂಕ ವಿಧಿಸುತ್ತಾರೆ, ನಾವು ವಿಧಿಸುತ್ತೇವೆ. ಹಾಗಾಗಿ ಇದೊಂದು ಸರಣ ಕ್ರಮ ಅಷ್ಟೇ. ಈ ಬಗ್ಗೆ ಯಾರೂ ನನ್ನೊಂದಿಗೆ ವಾದ ಮಾಡಲು ಸಾಧ್ಯವಿಲ್ಲ, ನಾವಿದನ್ನು ಮಾಡೇ ಮಾಡುತ್ತೇವೆ ಎಂದಿದ್ದಾರೆ.

ನಾನು ಭಾರತದ ಪ್ರಧಾನಿ ಮೋದಿ ಅವರಿಗೆ ಹೇಳಿದೆ. ನೀವು ಏನೇ ಶುಲ್ಕ ವಿಧಿಸಿದರೂ ಪ್ರತಿಯಾಗಿ ನಾವೂ ಸುಂಕ ವಿಧಿಸುತ್ತೇವೆ ಎಂದು ಹೇಳಿದೆ. ಅದ್ರೆ ಅವರು ನನ್ನ ಸಲಹೆಯನ್ನು ಒಪ್ಪಲಿಲ್ಲ. ಇದು ನನಗೆ ಇಷ್ಟವಿಲ್ಲ ಅಂತ ಹೇಳಿದರು. ನಾವು ಭಾರತವೊಂದಕ್ಕೆ ಸುಂಕ ವಿಧಿಸುತ್ತಿಲ್ಲ, ಚೀನಾದಂತೆ ಅನೇಕ ದೇಶಗಳಿಗೆ ಸುಂಕ ವಿಧಿಸುತ್ತೇವೆ. ಈ ಬಗ್ಗೆ ಯಾರೂ ನನ್ನೊಂದಿಗೆ ವಾದ ಮಂಡಿಸೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *