ತಮಿಳುನಾಡು : ತಿರುಪತಿಯಲ್ಲಿ ಕಾಲ್ತುಳಿತವಾಗಿರುವ ಬಗ್ಗೆ ಕೇಳಿದಾಗ, ಆ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಇನ್ನೊಂದು ರಾಜ್ಯದ ವಿಚಾರಕ್ಕೆ ಅವರ ಕಾನೂನು ಸುವ್ಯವಸ್ಥೆ ಬಗ್ಗೆ ಮಾತಾಡಲು ಹೋಗುವುದಿಲ್ಲ ಎಂದು ಹೇಳಿದರು.
ತಮಿಳುನಾಡು ದೇವಾಲಯಗಳ ಹಾಗೂ ಆಧ್ಯಾತ್ಮಿಕವಾದ ಭೂಮಿ. ನಮ್ಮ ಗುರುಗಳ ನಿರ್ದೇಶನದ ಮೇಲೆ ಗೋವರ್ಧನ ಹೋಮವನ್ನು ವರದರಾಜ ದೇವಾಲಯದಲ್ಲಿ ನೆರವೇರಿಸಿದ್ದೇನೆ. 2023ರ ವಿಧಾನಸಭಾ ಚುನಾವಣೆ ವೇಳೆ ನಾನು ವರದರಾಜ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೆ. ಜೊತೆಗೆ ತಮಿಳುನಾಡಿನ ಇನ್ನೂ ಅನೇಕ ದೇವಾಲಯಗಳಿಗೂ ಭೇಟಿ ಕೊಟ್ಟಿದ್ದೆ. ದೇವರ ಅನುಗ್ರಹದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಿತು ಎಂದು ಹೇಳಿದರು.