ಹುಬ್ಬಳ್ಳಿ : ಕರ್ನಾಟಕದ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್‌ ಸಿಎಂ ಆಗಬೇಕೆನ್ನುವುದು ನನ್ನ ಕನಸು ಎಂದು ಹುಬ್ಬಳ್ಳಿಯ ವರೂರಿನ ಗುಣಧರನಂದಿ ಸ್ವಾಮೀಜಿ ಅವರು ಭವಿಷ್ಯ ಹೇಳಿದ್ದಾರೆ.

ವರೂರಿನ ನವಗ್ರಹ ತೀರ್ಥಂಕರ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಸಿಎಂ ಆಗುವುದು, ಜೈನ ನಿಗಮ ಸ್ಥಾಪನೆ ಇವರೆಡೂ ನನ್ನ ಕನಸು. ಎಷ್ಟೇ ಕಾಟ ಇರಲಿ, ಎಷ್ಟೇ ಸಂಕಟ ಇರಲಿ ಡಿಕೆಶಿ ಸಿಎಂ ಆಗುತ್ತಾರೆ. ಇದು ನಮ್ಮ ಭವಿಷ್ಯವಾಣಿ ಎಂದ ವರೂರಿನ ಗುಣಧರನಂದಿ ಸ್ವಾಮೀಜಿ ಹೇಳಿದ್ದಾರೆ.

ಮುಂದಿನ ಅವಧಿಗೆ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗೇ ಆಗುತ್ತಾರೆ. ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ ಪಕ್ಷಕ್ಕೆ ಕಷ್ಟಪಟ್ಟಷ್ಟು ಯಾರೂ ಪಟ್ಟಿಲ್ಲ. ಕಾಂಗ್ರೆಸ್‌ಗೆ ಮರುಜೀವ ಕೊಟ್ಟಿದ್ದಾರೆ, ಇದನ್ನು ಕರ್ನಾಟಕ ಜನರು ಮರೆತಿಲ್ಲ. ಜೈನ ಸಮುದಾಯಕ್ಕೆ ಕೊಡುವುದು ಗೊತ್ತು, ಬೇಡುವುದು ಗೊತ್ತಿಲ್ಲ. ಆದರೆ, ಈಗ ನಿಗಮ ಮಂಡಳಿಗೆ ಬೇಡುತ್ತಿದ್ದೇವೆ, ಇದು ಸಮಾಜದ ಅಪೇಕ್ಷೆ ಎಂದು ಹುಬ್ಬಳ್ಳಿಯ ವರೂರಿನ ಗುಣಧರನಂದಿ ಸ್ವಾಮೀಜಿ ಹೇಳಿದ್ದಾರೆ. ಈ ವೇಳೆ ವೇದಿಕೆ ಮೇಲಿನ ಎಲ್ಲಾ ಆಚಾರ್ಯರು, ಜೈನಮುನಿಗಳು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆಶೀರ್ವದಿಸಿದ್ದಾರೆ.

ಈ ವೇಳೆ ವರೂರಿನ ನವಗ್ರಹ ತೀರ್ಥಂಕರ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​, ನಾನು ಸಿಎಂ ಆಗಲೆಂದು ಗುಣಧರನಂದಿ ಶ್ರೀಗಳು ಆಶೀರ್ವದಿಸಿದ್ದಾರೆ. ನೀವು ಆಶೀರ್ವಾದಿಸಿದಾಗಲೆಲ್ಲಾ ನಮಗೆ ಏಟು ಕೊಡುತ್ತಿರುತ್ತಾರೆ. ವಿನಯ್ ಗುರೂಜಿ ಈ ಮಾತನ್ನು ಮೊದಲೇ ಹೇಳಿದ್ದರು ಎಂದು ಜೈನ ಮುನಿಗಳ ಆಶೀರ್ವಾದಕ್ಕೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.

ಅಹಿಂಸೆ, ಸತ್ಯ, ತ್ಯಾಗಕ್ಕೆ ಮತ್ತೊಂದು ಹೆಸರು ಜೈನ ಧರ್ಮ. ಈ ಡಿಕೆಶಿ ನಿಮ್ಮ ಧರ್ಮದ ಜೊತೆ ಇರುತ್ತಾನೆ. ನನ್ನ ಮೇಲೆ ನಂಬಿಕೆ ಇಡಿ. ಜೈನ ಅಭಿವೃದ್ಧಿ ನಿಗಮ ಮಾಡಲು ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಮಾತನಾಡಿ, ಮುಂಬರುವ ಬಜೆಟ್​ನಲ್ಲಿಯೇ ರಚನೆ ಮಾಡಲು ಮನವಿ ಮಾಡುತ್ತೇನು. ಜೈನರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕೊಟ್ಟಿದ್ದು ನಮ್ಮ ಕಾಂಗ್ರೆಸ್. ನಮ್ಮ ಸರ್ಕಾರ, ನಮ್ಮ ಪಕ್ಷ ನಿಮ್ಮ ಜೊತೆಗೆ ಇರುತ್ತದೆ ಎಂದು ಡಿಕೆಶಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *