ಬೆಂಗಳೂರು : ಫೆ.16ರಂದು ಸ್ತ್ರೀತಜ್ಞೆ ಧನ್ಯತಾ ಅವರೊಂದಿಗೆ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಹಸೆಮಣೆ ಏರಲಿದ್ದಾರೆ. ಈ ಹಿನ್ನೆಲೆಯಲ್ಲಿ ಗಣ್ಯರನ್ನು ಭೇಟಿ ಮಾಡಿ ಆಮಂತ್ರಣವನ್ನೂ ನೀಡುತ್ತಿದ್ದಾರೆ. ಇನ್ನು ಮದುವೆ ಕುರಿತು ಡಾಲಿ ಜೋಡಿ ಸುದ್ದಿಗೋಷ್ಠಿ ನಡೆಸಿದ್ದು, ದರ್ಶನ್‌ರನ್ನು ತಮ್ಮ ಮದುವೆಗೆ ಏಕೆ ಕರೆದಿಲ್ಲ ಎಂಬ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟಿದ್ದಾರೆ.
ಡಾಲಿ ಧನಂಜಯ್ ದರ್ಶನ್‌ರನ್ನ ಮದುವೆಗೆ ಕರೆದಿಲ್ಲ ಎಂಬ ಚರ್ಚೆ ಬರುತ್ತಿದ್ದಂತೆ ಸುದ್ದಿಗೋಷ್ಠಿಯಲ್ಲಿ ಡಾಲಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ದರ್ಶನ್‌ರನ್ನ ಸಂಪರ್ಕಿಸಲು ಪ್ರಯತ್ನ ಪಟ್ಟೆ, ಆದರೆ ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ಅವರನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡುತ್ತೇನೆ. ಯಾರನ್ನೂ ಬಿಟ್ಟಿಲ್ಲ, ಎಲ್ಲರನ್ನೂ ಕರೆದಿದ್ದೇನೆ. ಅವರನ್ನೂ ಕರೆಯುವ ಆಸೆ ಇದೆ, ಆದರೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಶೀಘ್ರದಲ್ಲೇ ಅದೂ ನೆರವೇರುತ್ತದೆ. ಅದು ಬಿಟ್ಟು ಏನೂ ಇಲ್ಲ ಎಂದು ಡಾಲಿ ತಿಳಿಸಿದ್ದಾರೆ.