‘ಕೆಜಿಎಫ್’ ಸ್ಟಾರ್ ಯಶ್ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಕುಟುಂಬದ ಜೊತೆ ಹೊಸ ವರ್ಷ ಆಚರಿಸಿದ್ದಾರೆ. ಫ್ಯಾಮಿಲಿ ಜೊತೆಗಿನ ಸುಂದರ ಫೋಟೋಗಳನ್ನು ನಟ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ಪುಟ್ಟ ಕುಟುಂಬದ ಕಡೆಯಿಂದ ಹೊಸ ವರ್ಷಕ್ಕೆ ಶುಭಾಶಯಗಳು. ನಿಮ್ಮೆಲ್ಲರಿಗೂ ಸಂತೋಷ, ಪ್ರೀತಿ ಮತ್ತು ನಗು ತುಂಬಿರಲಿ ಎಂದು ಹಾರೈಸುತ್ತೇನೆ. ನಮ್ಮ ಕಡೆಯಿಂದ ನಿಮಗೆ ಹೊಸ ವರ್ಷದ ಶುಭಾಶಯಗಳು ಎಂದು ಯಶ್ ದಂಪತಿ ಫ್ಯಾನ್ಸ್‌ಗೆ ವಿಶ್ ಮಾಡಿದ್ದಾರೆ. ಯಶ್ ಕುಟುಂಬದ ಹ್ಯಾಪಿ ಮೂಮೆಂಟ್ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.
ಯಶ್ ಅವರು ಟಾಕ್ಸಿಕ್ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದು. ಈ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್ ’ರಾಮಾಯಣ’ ಸಿನಿಮಾದಲ್ಲಿ ಸಹ ನಿರ್ಮಾಪಕನಾಗಿ ಸಾಥ್ ಕೊಟ್ಟಿದ್ದಾರೆ. ಈ ಜೊತೆಗೆ ರಾಮನ ಪಾತ್ರಧಾರಿ ರಣ್‌ಬೀರ್ ಕಪೂರ್ ಮುಂದೆ ರಾವಣನಾಗಿ ಯಶ್ ಅಬ್ಬರಿಸಲಿದ್ದಾರೆ ಎನ್ನಲಾಗಿದೆ.