ಡೆಂಘೀ ಸೇರಿದಂತೆ ಹಲವು ಜ್ವರಗಳ ಭೀತಿ ಎದುರಿಸುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಇದೀಗ ಝೀಕಾ ವೈರಸ್ ಆತಂಕವನ್ನೂ ಎದುರಿಸುವಂತಾಗಿದ್ದು, ನಾಗರಿಕರನ್ನು ಸಾಂಕ್ರಾಮಿಕ ಕಾಯಿಲೆಗಳಿಂದ ದೂರ ಮಾಡಲು 5ನೇ ವಾರ್ಡಿನಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ.
5ನೇ ವಾರ್ಡಿನ ಪೊಲೀಸ್ ವಸತಿ ಗೃಹಗಳ ಬಿ ಬ್ಲಾಕ್ ಹಿಂಭಾಗದಲ್ಲಿ ವ್ಯಾಪಕವಾಗಿ ಬೆಳೆದಿದ್ದ ಗಿಡ ಕಟೋವ್ ಮಾಡಿ ಸ್ವಚ್ಛಗೊಳಿಸಲಾಗಿದ್ದು,
ಇನ್ನೂ ಚರಂಡಿಗಳನ್ನೂ ಸ್ವಚ್ಛಗೊಳಿಸಲಾಗುತ್ತಿದೆ. ವಾರ್ಡಿನಾದ್ಯಂತ ಎಲ್ಲಿಯೂ ಸೊಳ್ಳೆಗಳ ಆಶ್ರಯ ತಾಣವಾದ ನೀರು ನಿಲ್ಲದಂತೆ ಎಚ್ಚರ ವಹಿಸಲಾಗಿದ್ದು, ಜನರಲ್ಲಿಯೂ ಶೇಖರಿಸಿದ ನೀರಿನ ಮೇಲೆ ಮುಚ್ವಿಡುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ.
ವಾರ್ಡಿನಾದ್ಯಂತ ಇರುವ ಚರಂಡಿಗಳ ಸ್ವಚ್ಛತೆ, ಗಿಡ ಗಂಟಿಗಳ ತೆರುವು ಮಾಡಲಾಗಿದೆ. ಮುಖ್ಯವಾಗಿ ಕೊಳಚೆ ಪ್ರದೇಶಗಳಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ, ಬ್ಲೀಚಿಂಗ್ ಸಿಪಡಣೆ ಮಾಡಿ
ಈಗಾಗಲೇ ಹಲವು ಸುತ್ತು ಫಾಗಿಂಗ್ ಕೊಡ ಮಾಡಲಾಗಿದ್ದೆ ಎಂದು ನಗರ ಸಭೆ ಸದಸ್ಯ ನಾಗರಾಜ್ ತಿಳಿಸಿದ್ದಾರೆ.