ನವದೆಹಲಿ: ಮೈತ್ರಿ ವಿಚಾರವಾಗಿ ಈ ಹಿಂದೆ ಕೇಳಿದ್ದಾಗ ಅಂಥದ್ದು ಏನೂ ಇಲ್ಲ ಎಂದೇ ದೇವೇಗೌಡರು ನನ್ನ ಹತ್ತಿರ ಹೇಳುತ್ತ ಬಂದಿದ್ದರೂ ಅವರು ಮನಸ್ಸು ಬದಲಾಯಿಸಿಲ್ಲ ಅಂದರೆ ನಿಲುವಳಿ ಕೈಗೊಂಡು ಬೇರೆ ಅಧ್ಯಕ್ಷರನ್ನು ಆಯ್ಕೆ ಮಾಡ್ತೇವೆ ಎಂದು ಇಬ್ರಾಹಿಂ ಹೇಳಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ನಿಮಗೆ ಬೆಂಬಲ ಕೊಡ್ತೀವಿ ಎಂದಾಗಲೇ ನೀವು ಬಿಟ್ಟು ಬಂದವರು. ಈಗ ಏನು ಪರಿಸ್ಥಿತಿ ಬಂದಿದೆ. ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಬುದ್ದಿ ಹೇಳಿ. ನಾವು ಇಂಡಿಪೆಂಡೆಂಟ್ ಆಗಿ ಮುಂದಿನ ಚುನಾವಣೆಯಲ್ಲಿ ನಿಂತರೂ ಸಹ ೩ ಸ್ಥಾನ ಗೆಲ್ಲುತ್ತೇವೆ. ಬಿಜೆಪಿ ಜೊತೆ ಹೋದ್ರೆ ಒಂದು ಸೀಟು ಗೆಲ್ಲಲ್ಲ. ಮದುವೇಗೆ ಬ್ರಾಹ್ಮಣರು ಬರುತ್ತಾ ಇಲ್ಲ. ಇನ್ನೂ ಒಕ್ಕಲಿಗರಿಗೆ ಮತ ಹಾಕುವುದಕ್ಕೆ ಬರ್ತಾರಾ ಎಂದು ಅವರು ಪ್ರಶ್ನಿಸಿದರು.
ಕೇರಳಾ, ಮಹಾರಾಷ್ಟ್ರ ಮತ್ತು ಬಿಹಾರ್ ರಾಜ್ಯದಲ್ಲಿರುವ ಜನತಾದಳ ನಾಯಕರೊಂದಿಗೆ ಸಭೆ ಮಾಡ್ತೀವಿ. ಜನತಾದಳ ನಮ್ದೇ ಒರಿಜಿನಲ್ ಸ್ಟ್ರೆಂತ್. ಮೀಟಿಂಗ್ ಮಾಡಿ ನಾವು ದೇವೇಗೌಡ್ರಿಗೆ ಹೇಳ್ತೇವೆ. ಕರ್ನಾಟಕದಿಂದ ಹೋದ ಏಕೈಕ ಪ್ರಧಾನ ಮಂತ್ರಿ, ಮಕ್ಕಳ ಮಾತು ಕೇಳಿ ಹಾಳಾಗಬೇಡಿ. ದೇಶ ಮುಖ್ಯ ನಾವು ನಿಮ್ಮ ಮಕ್ಕಳಂತೆ ಎಂದು ಇಬ್ರಾಹಿಂ ತಿಳಿಸಿದ್ದಾರೆ.