ನವರಾತ್ರಿ ಅಂಗವಾಗಿ ಗುಜರಾತ್ ನಲ್ಲಿ ವಿವಿದೆಡೆ ಹಮ್ಮಿಕೊಂಡಿದ್ದ ಗಾಬ್ರಾ ಕಾರ್ಯಕ್ರಮದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 13 ಮತ್ತು 17 ವರ್ಷದ ಬಾಲಕರು ಸೇರಿದ್ದಾರೆ.
ಗುಜರಾತ್ ನಲ್ಲಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ 24 ಗಂಟೆಯಲ್ಲಿ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 500ಕ್ಕೂ ಹೆಚ್ಚು ಆಂಬುಲೆನ್ಸ್ ಗಳನ್ನು ಸಜ್ಜುಗೊಳಿಸಲಾಗಿದೆ.
ಗಾರ್ಬಾ ನೃತ್ಯ ಕಾರ್ಯಕ್ರಮದ ವೇಳೆ ಸಾವುಗಳು ಸಂಭವಿಸುತ್ತಿರುವ ಬಗ್ಗೆ ಗುಜರಾತ್ ಸರ್ಕಾರ ಆಘಾತ ವ್ಯಕ್ತಪಡಿಸಿದ್ದು, ಸಂಘಟಕರು ಕಾರ್ಯಕ್ರಮದ ವೇಳೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಖೇಡಾ ಜಿಲ್ಲೆಯ ಕಾಪಾಡ್ವಜ್ ಪ್ರದೇಶದ 17 ವರ್ಷದ ಬಾಲಕ ವೀರ್ ಶಾಹ್ ಮೃತಪಟ್ಟಿದ್ದು, ಸಾವಿಗೀಡಾದವರಲ್ಲಿ ಅತ್ಯಂತ ಕಿರಿಯನಾಗಿದ್ದಾನೆ. ನೃತ್ಯದ ವೇಳೆ ದಿಢೀರನೆ ಕುಸಿದುಬಿದ್ದಿದ್ದು, ನಂತರ ರಕ್ತಸ್ರಾವಕ್ಕೆ ಒಳಗಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ವಡೋದರಾ ಜಿಲ್ಲೆಯ ಡಾಭೋಯಿಯಲ್ಲಿ 13 ವರ್ಷದ ಬಾಲಕ ವೈಭವ್ ಸೋನಿ ಎಂಬಾತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.