ಟ್ಯೂಷನ್​ ಮುಗಿಸಿಕೊಂಡ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಸ್ನೇಹಿತ!

ಟ್ಯೂಷನ್​ ಮುಗಿಸಿಕೊಂಡ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಸ್ನೇಹಿತ!

Student Burnt alive: ಆಂಧ್ರಪ್ರದೇಶದಲ್ಲಿ ದಾರುಣ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಟ್ಯೂಷನ್​ ಮುಗಿಸಿಕೊಂಡು ಬರುತ್ತಿದ್ದ ವಿದ್ಯಾರ್ಥಿ ಮೇಲೆ ಸ್ನೇಹಿತನೊಬ್ಬ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿರುವ ಘಟನೆ ಬಾಪಟ್ಲಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಬಾಪಟ್ಲಾ, ಆಂಧ್ರಪದೇಶ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವೆಡೆ ಕೊಲೆ, ಆತ್ಮಹತ್ಯೆ, ಹಲ್ಲೆ, ಆಯಸಿಡ್ ದಾಳಿ, ಪೆಟ್ರೋಲ್ ದಾಳಿ ಹೆಚ್ಚುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಏಲೂರಿನಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವಿವಾಹಿತ ಮಹಿಳೆ ಮೇಲೆ ಅಪರಿಚಿತರು ಆಯಸಿಡ್ ದಾಳಿ ನಡೆಸಿದಿದ್ದರು. ಈ ಘಟನೆ ಮಾಸುವ ಮುನ್ನವೇ ಬಾಪಟ್ಲಾ ಜಿಲ್ಲೆಯಲ್ಲಿ ಮತ್ತೊಂದು ದೌರ್ಜನ್ಯ ಪ್ರಕರಣ ದಾಖಲಾಗಿದೆ. ಈ ಘಟನೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ (Student Burnt alive).

10ನೇ ತರಗತಿ ವಿದ್ಯಾರ್ಥಿ ಅಮರನಾಥ್ ಮೇಲೆ ಸ್ನೇಹಿತರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಚೆರುಕುಪಲ್ಲಿ ತಾಲೂಕಿನ ರಾಜೋಲು ಎಂಬಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಟ್ಯೂಷನ್‌ಗೆ ಹೋಗುತ್ತಿದ್ದಾಗ ಬಾಲಕನ ಸ್ನೇಹಿತ ವೆಂಕಟೇಶ್ವರ ರೆಡ್ಡಿ ಇತರ ಕೆಲವರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಅಮರನಾಥ್ ಅವರನ್ನು ಗುಂಟೂರು ಜಿಜಿಎಚ್‌ಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಡಿಟೇಲ್ಸ್​ಗೆ ಬರೋದಾದ್ರೆ.. ಚೆರುಕುಪಲ್ಲಿ ತಾಲೂಕಿನ ರಾಜೋಲು ಪಂಚಾಯತ್ ವ್ಯಾಪ್ತಿಯ ಉಪ್ಪಳವಾರಿಪಾಲೆಂನ ಉಪ್ಪಳ ಅಮರನಾಥ್ ಸ್ಥಳೀಯ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಾನೆ. ನಿತ್ಯ ಬೆಳಗ್ಗೆ ರಾಜೋಲುವಿಗೆ ಟ್ಯೂಷನ್​ಗೆ ಹೋಗಿ ಬರುತ್ತಿದ್ದರು. ಶುಕ್ರವಾರ ಬೆಳಗ್ಗೆಯೂ ಎಂದಿನಂತೆ ಅಮರನಾಥ್ ಟ್ಯೂಷನ್​ಗೆ ಹೋಗಿ ಬರುತ್ತಿದ್ದರು. ಈ ವೇಳೆ ಸ್ನೇಹಿತ ವೆಂಕಟೇಶ್ವರ ರೆಡ್ಡಿ ಕೆಲವರ ಜೊತೆ ಸೇರಿ ಮಾರ್ಗಮಧ್ಯೆ ಅವರನಾಥ್​ನನ್ನು ಅಡ್ಡಗಟ್ಟಿದ್ದಾನೆ. ಈ ವೇಳೆ, ರೆಡ್ಲಪಾಲೆಂನಲ್ಲಿ ಅಮರನಾಥ್​ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಬಾಲಕ ಬೆಂಕಿಯ ಜ್ವಾಲೆಯ ನೋವಿನಿಂದ ಚೀರಾಡುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಬೆಂಕಿ ನಂದಿಸಿ ಆತನನ್ನು ಗುಂಟೂರು ಜಿಜಿಎಚ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಬಾಲಕ ಮೃತಪಟ್ಟಿದ್ದಾನೆ. ಬಾಲಕ ಸಾವಿಗೂ ಮುನ್ನ ವೆಂಕಟೇಶ್ವರ್ ರೆಡ್ಡಿ ಮತ್ತು ಇತರರು ನನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು ಎಂದು ಅಮರನಾಥ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಘಟನೆ ಸಂಬಂಧ ಚೆರುಕುಪಲ್ಲಿ ಎಸ್‌ಎಸ್‌ಐ ಕೊಂಡ ರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ತನಿಖೆ ಬಳಿಕವೇ ವಿದ್ಯಾರ್ಥಿ ಅಮರನಾಥ್​ ಸಾವಿಗೆ ಕಾರಣ ತಿಳಿದು ಬರಲಿದೆ.

ಏಲೂರು ಆಯಸಿಡ್ ದಾಳಿ ಆರೋಪಿ ಬಂಧನ: ಏಲೂರಿನಲ್ಲಿ ಮಹಿಳೆ ಮೇಲೆ ಆಯಸಿಡ್ ದಾಳಿ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮೇರಿ ಪ್ರಶಾಂತಿ ತಿಳಿಸಿದ್ದಾರೆ. ಸಂತ್ರಸ್ತೆಯ ಸಹೋದರಿ ಜೊತೆ ಹಲ್ಲೆಯ ಪ್ರಮುಖ ಆರೋಪಿ ಸತೀಶ್​ ಎಂಬಾತ ಪರಿಚಯವಿತ್ತು. ಆಗಾಗ ಬರುತ್ತಿದ್ದ ಮನೆಗೆ ಬರತ್ತಿದ್ದ ಸತೀಶ್​ನನ್ನು ಮನೆಗೆ ಬರಬೇಡಿ ಎಂದು ಸಂತ್ರಸ್ತೆ ಹೇಳಿದ್ದಳು.

ತನ್ನ ದಾರಿಗೆ ಅಡ್ಡಿಯಾಗಿದ್ದ ಮಹಿಳೆಯನ್ನು ತಪ್ಪಿಸಲು ಮುಂದಾದ ಸತೀಶ್ ಮತ್ತಿಬ್ಬರು ಜೊತೆ ಸೇರಿ ಹಲ್ಲೆ ನಡೆಸಿದ್ದಾನೆ. ಸಂತ್ರಸ್ತೆಯ ಎಡಗಣ್ಣಿನ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದ್ದು, ಆ ಕಣ್ಣಿಗೆ ಯಾವುದೇ ಅಪಾಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ಬಲಗಣ್ಣಿನ ಪರೀಕ್ಷೆ ನಡೆಯಬೇಕಿದೆ. ಆ ನಂತರವೇ ದೃಷ್ಟಿ ಸ್ಪಷ್ಟವಾಗಲಿದೆ ಎಂದು ಎಸ್​ಪಿ ವಿವರಿಸಿದರು.

Leave a Reply

Your email address will not be published. Required fields are marked *