Grandma Bowing To Bus Footboard Photo Viral : ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೊಳಿಸಿದೆ. ಸದ್ಯ ಯೋಜನೆಯ ಫಲಾನುಭವಿ ಅಜ್ಜಿಯೊಬ್ಬರು ಬಸ್ ಹತ್ತುವುದಕ್ಕೂ ಮುನ್ನ ಬಸ್ ಫುಟ್ಬೋರ್ಡ್ಗೆ ನಮಸ್ಕಾರ ಮಾಡಿದ್ದಾರೆ. ಈ ಫೋಟೊ ಎಲ್ಲೆಡೆ ವೈರಲ್ ಆಗಿದೆ. ಸದ್ಯ ಸಿಎಂ ಸಿದ್ದರಾಮಯ್ಯ ಕೂಡಾ ಪೋಟೊ ಟ್ವೀಟ್ ಮಾಡಿ ಯೋಜನೆ ಜಾರಿ ಮಾಡಿದ್ದಕ್ಕೂ ಸಾರ್ಥಕ ಆಯ್ತು ಎಂದಿದ್ದಾರೆ.
ಹೈಲೈಟ್ಸ್:
- ಉಚಿತ ಬಸ್ ಪ್ರಯಾಣಕ್ಕೆ ಮುಂದಾದ ಅಜ್ಜಿಯೊಬ್ಬರು ಬಸ್ ಹತ್ತುವ ಮುನ್ನ ಬಸ್ನ ಪುಟ್ಬೋರ್ಡ್ನಲ್ಲಿ ಹಣೆಹಚ್ಚಿ ನಮಸ್ಕರಿಸಿ ಬಸ್ ಹತ್ತಿದ್ದಾರೆ.
- ಬೆಳಗಾವಿ ಜಿಲ್ಲೆ ಸಂಗೊಳ್ಳಿ ಗ್ರಾಮ ನಿಂಗವ್ವ ಸಿಂಗಾಡಿ ಎಂಬ ಅಜ್ಜಿ ನಮಸ್ಕಾರ ಮಾಡಿದ ಫೋಟೊ ವೈರಲ್
- ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತನ, ಸಾರ್ಥಕವಾಯಿತು ಯೋಜನೆ ಜಾರಿ ಮಾಡಿದ್ದು ಎಂದಿದ್ದಾರೆ.
ಬೆಂಗಳೂರು: ಉಚಿತ ಬಸ್ ಪ್ರಯಾಣಕ್ಕೆ ಮುಂದಾದ ಅಜ್ಜಿಯೊಬ್ಬರು ಬಸ್ ಹತ್ತುವ ಮುನ್ನ ಬಸ್ನ ಪುಟ್ಬೋರ್ಡ್ನಲ್ಲಿ ಹಣೆಹಚ್ಚಿ ನಮಸ್ಕರಿಸಿ ಬಸ್ ಹತ್ತಿದ್ದಾರೆ. ಈ ಮೂಲಕ ಉಚಿತ ಬಸ್ ಪ್ರಯಾಣಕ್ಕೆ ಕೃತಜ್ಞತೆ ಜತೆ ಹಾರೈಕೆ ನೀಡಿದ್ದಾರೆ. ಸದ್ಯ ಈ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಕೂಡಾ ಟ್ವೀಟ್ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆ ಸಂಗೊಳ್ಳಿ ಗ್ರಾಮ ನಿಂಗವ್ವ ಸಿಂಗಾಡಿ ಎಂಬ ಅಜ್ಜಿಯು ಸವದತ್ತಿಯಲ್ಲಿ ತನ್ನ ಮೊಮ್ಮಗನ ಮನೆ ಗೃಹ ಪ್ರವೇಶಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಧಾರವಾಡ-ಗೋಕಾಕ ಬಸ್ ಏರಿವಾಗ ಆ ಬಸ್ಗೆ ಹಣೆಹಚ್ಚಿ ನಮಸ್ಕಾರ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತಸ
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ” ನಾವು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೆ ಸಮಾಜದ ಎಲ್ಲಾ ವಿಧದ ಸೌಲಭ್ಯಗಳನ್ನು ಕೂತಲ್ಲಿಯೇ ಅನುಭವಿಸುತ್ತಿರುವ ಜನರಿಂದ ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾದವು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇಂದು ಶಕ್ತಿ ಯೋಜನೆಯನ್ನು ಜಾರಿಗೆ ಕೊಟ್ಟೆವು. ನಮ್ಮ ಯೋಜನೆ ಜಾರಿಗೊಂಡ ನಂತರ ತಾಯಿಯೊಬ್ಬರು ಧಾರವಾಡ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ನಮಸ್ಕರಿಸಿ ಅತ್ಯಂತ ಸಂತೋಷದಿಂದ ಉಚಿತ ಪ್ರಯಾಣ ಬೆಳೆಸಿದರು” ಎಂದಿದ್ದಾರೆ.