ಮಹಾರಾಣಿ ಕಾಲೇಜ್ ಬಳಿ ಇರುವ ಅಂಡರ್ ಪಾಸ್ನಲ್ಲಿ ಲಾರಿಯೊಂದು ಸಿಲುಕಿದ್ದು, ಸದ್ಯ ಸಂಚಾರಿ ಪೊಲೀಸರು ಅಂಡರ್ ಪಾಸ್ ಬಂದ್ ಮಾಡಿ ಟ್ರಾಫಿಕ್ ಡೈವರ್ಶನ್ ನೀಡಿದ್ದಾರೆ.

ಬೆಂಗಳೂರು: ಇತ್ತಿಚಿಗೆ ನಗರದ ಕೆ.ಆರ್.ಸರ್ಕಲ್ ಅಂಡರ್ ಪಾಸ್ನಲ್ಲಿ (KR Circle Underpass) ಮಳೆ ನೀರಿಗೆ ಕಾರು ಸಿಲುಕಿ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಸಾವನ್ನಪ್ಪಿದ್ದರು. ಈ ಪ್ರಕರಣದ ಬೆನ್ನಲ್ಲೇ ನಗರದ ಮತ್ತೊಂದು ಅಂಡರ್ ಪಾಸ್ನಲ್ಲಿ (Underpass) ಲಾರಿ (Lorry) ಸಿಲುಕಿದೆ. ಹೌದು ಮೈಸೂರು ಬ್ಯಾಂಕ್ (Mysore Bank) ಕಡೆಯಿಂದ ಬಂದ ಲಾರಿಯೊಂದು ಮಹಾರಾಣಿ ಕಾಲೇಜ್ (Maharani College) ಬಳಿ ಇರುವ ಅಂಡರ್ ಪಾಸ್ನಲ್ಲಿ ಸಿಲುಕಿಕೊಂಡಿದೆ. ಈ ಹಿನ್ನೆಲೆ ಉಪ್ಪಾರಪೇಟೆ ಸಂಚಾರಿ ಪೊಲೀಸರು ಲಾರಿ ಹೊರ ತೆಗೆಯಲು ಜೆಸಿಬಿ ತರಿಸಿ ಹರಸಾಹಸ ಪಡುತ್ತಿದ್ದಾರೆ. ಸದ್ಯ ಸಂಚಾರಿ ಪೊಲೀಸರು ಅಂಡರ್ ಪಾಸ್ ಬಂದ್ ಮಾಡಿ ಟ್ರಾಫಿಕ್ ಡೈವರ್ಶನ್ ನೀಡಿದ್ದಾರೆ.

ಚಾಲುಕ್ಯ ಸರ್ಕಲ್​​ಗೆ ಬರಲು ಫ್ರೀಡಂ ಪಾರ್ಕ್ ಕಡೆಯಿಂದ ಬರಲು ಸಂಚಾರಿ ಪೊಲೀಸರ ಸೂಚನೆ ನೀಡಿದ್ದಾರೆ. ಅಂಡರ್ ಪಾಸ್​​ನಲ್ಲಿ ಲಾರಿ ತೆರಳಲು ಸಾಧ್ಯವಿಲ್ಲ. ಆದರೂ ಲಾರಿ ಬಂದಿರುವುದು ವಿಪರ್ಯಾಸ.

ಚಿತ್ರದುರ್ಗ: ಆಕಸ್ಮಿಕ ಬೆಂಕಿಯಿಂದ ಲಾರಿ ಹೊತ್ತಿ ಉರಿದ ಘಟನೆ ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಲಾರಿ ಚಾಲಕ, ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೆಂಗಳೂರಿನಲ್ಲಿವೆ ಯಮರೂಪಿ ಅಂಡರ್ ಪಾಸ್​ಗಳು

ಶಿವಾನಂದ ರೈಲ್ವೆ ಅಂಡರ್ ಪಾಸ್ ಅತ್ಯಂತ ಡೇಂಜರೆಸ್. ಕೆ‌.ಆರ್. ಸರ್ಕಲ್ ಅಂಡರ್ ಪಾಸ್, ಪ್ಯಾಲೇಸ್ ರೋಡ್ ಗಾಲ್ಫ್ ಅಂಡರ್ ಪಾಸ್, ಮಾಗಡಿ ರೋಡ್ ನ ಹೌಸಿಂಗ್ ಬೋಡ್೯ ಅಂಡರ್ ಪಾಸ್, ಟೋಲ್ ಗೇಟ್ ಅಂಡರ್ ಪಾಸ್, ನಾಯಂಡಹಳ್ಳಿ, ಅಂಡರ್ ಪಾಸ್​ಗಳು ತುಂಬಾ ಡೇಂಜರ್. ಮಳೆ ಬಂದ 10 ನಿಮಿಷಕ್ಕೆ ಈ ಅಂಡರ್ ಪಾಸ್​ಗಳು ಕೆರೆಯಂತಾಗುತ್ತವೆ. ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲದೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವುದೇ ಇದಕ್ಕೆ ಮುಖ್ಯ ಕಾರಣ. ಹೀಗಾಗಿ ಅಂಡರ್ ಪಾಸ್​ಗಳನ್ನು ದಾಟಿ ಮನೆಗೆ ಹೋಗುವಾಗ ಎಚ್ಚರ ವಹಿಸಿ.

Leave a Reply

Your email address will not be published. Required fields are marked *