ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧದಿಂದ ಸಾವಿರಾರು ಸಂಖ್ಯೆಯಲ್ಲಿ ನಾಗರೀಕರು ಮೃತಪಟ್ಟಿರುವುದಲ್ಲದೆ, ರಕ್ಷಣಾ ವ್ಯವಸ್ಥೆ ಅದೋಗತಿಯಾಗಿದೆ. ಈ ಬಗ್ಗೆ ಭಾರತಕ್ಕೆ ತೀವ್ರ ಅನುಕಂಪವಿದೆ ಎಂದು ರಾಯಭಾರಿ ಆರ್. ರವೀಂದ್ರ ಅವರು ವಿಶ್ವ ಸಂಸ್ಥೆಯ ರಕ್ಷಣಾ ಮಂಡಳಿಯ ಸಭೆಯಲ್ಲಿ ತಿಳಿಸಿದ್ದಾರೆ.
ಆರ್. ರವೀಂದ್ರರವರು ಮುಕ್ತ ಚರ್ಚೆಯಲ್ಲಿ ಮದ್ಯ ಪ್ರಾಶ್ಚ್ಯದಲ್ಲಿನ ಸ್ಥಿತಿಗತಿ ಅಂದರೆ ಪ್ಯಾಲೆಸ್ಟೈನಿಯನ್ ಪ್ರಶ್ನೆಯಾಗಿದೆ.
ಅಕ್ಟೋಬರ್ ೭ರಂದು ಇಸ್ರೇಲ್ ಮೇಲೆ ದಾಳಿ ನಡೆದಿದ್ದು ಶಾಕಿಂಗ್ ಆಗಿದೆ ಮತ್ತು ನಾವು ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ. ನಮ್ಮ ಪ್ರಧಾನಿ ರಾಷ್ಟ್ರೀಯ ನಾಯಕರಲ್ಲಿ ಯುದ್ಧದಲ್ಲಿ ಮೃತಪಟ್ಟವರಿಗೆ ನಮನಗಳನ್ನು ಸಲ್ಲಿಸಿ, ಅವರ ಕುಟುಂಬಗಳ ಪರವಾಗಿ ಪ್ರಾರ್ಥನೆ ಸಲ್ಲಿಸಿರುವ ಮೊದಲಿಗರಾಗಿದ್ದಾರೆ.
ಇಸ್ರೇಲ್ ಪರವಾಗಿ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ನಿಂತಿದೆ. ಹಮಾಸ್ ಉಗ್ರರು ದಾಳಿ ನಡೆಸಿದಾಗ ಇಸ್ರೇಲ್ನಲ್ಲಿ ಮೃತಪಟ್ಟವರ ಬಗ್ಗೆ ಅನುಕಂಪದಿಂದ ಭಾರತ ವರ್ತಿಸುತ್ತಿದೆ.ಇದರ ಜೊತೆಗೆ ಗಾಯಗೊಂಡವರು ತ್ವರಿತಗತಿಯಲ್ಲಿ ಗುಣವಾಗುವಂತೆ ಪ್ರಾರ್ಥಿಸುತ್ತಿದ್ದೇವೆ ಎಂದು ರವೀಂದ್ರ ಹೇಳಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೆಸ್ಟೈನಿಯನ್ ನಡುವೆ ಮಾತುಕತೆ ನಡೆಸುವ ಮೂಲಕ ಈ ಬಿಕ್ಕಟ್ಟಿಗೆ ಮುಕ್ತಿ ನೀಡಲಾಗುವುದು ಎಂದು ರವೀಂದ್ರ ತಿಳಿಸಿದ್ದಾರೆ.