ಧಾರವಾಡ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun kharge) `ಮೋದಿ ವಿಷದ ಹಾವು ಇದ್ದಂತೆ’ ಎಂದು ಹೇಳಿಕೆ ನೀಡಿದ ಬಳಿಕ ಹರಿಹಾಯ್ದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ (Basanagouda Patil Yatnal) `ಸೋನಿಯಾ ಗಾಂಧಿ ವಿಷಕನ್ಯೆನಾ?’ ಎಂದು ಪ್ರಶ್ನಿಸಿ ವಿವಾದಕ್ಕೀಡಾಗಿದ್ದರು. ಇದೀಗ ಮತ್ತೆ ರಾಹುಲ್ ಗಾಂಧಿ ಹುಚ್ಚ ಅಲ್ಲ ಅರೆಹುಚ್ಚ ಎಂದು ಹೇಳುವ ಮೂಲಕ ಮತ್ತೆ ನಾಲಗೆ ಹರಿಬಿಟ್ಟಿದ್ದಾರೆ.

ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ (Rahul Gandhi) ಅವರು ಹುಚ್ಚ ಅಲ್ಲ, ಅರೆಹುಚ್ಚ. ಪಾಕಿಸ್ತಾನಿಗಳೇ ಬೆಂಬಲಕೊಡಿ ಮೋದಿಯವರನ್ನ (Narendra Modi) ದೇಶದಿಂದ ಹೊರಗೆ ಹಾಕ್ತೀವಿ ಅಂತಾರೆ. ದೇಶದ ಬಗ್ಗೆ ಕಾಳಜಿ ಇಲ್ಲದವರನ್ನ ಅರೆಹುಚ್ಚ ಅನ್ನದೆ ಗ್ರೇಟ್ ಸ್ಕಾಲರ್ ಅನ್ಬೇಕಾ? ಎಂದು ಪ್ರಶ್ನಿಸಿದ್ದಾರೆ.

ಇವತ್ತು ಮೋದಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಹಗುರವಾಗಿ ಮಾತನಾಡಿದ್ದಾನೆ. ಅವರ ಪಕ್ಷದಲ್ಲೇ ಮೂರು ಬಿಟ್ಟವರು ಇದ್ದಾರೆ. ಆದ್ರೆ ಮೋದಿ 150 ಕೋಟಿ ಜನರ ಆಶೀರ್ವಾದ ಪಡೆದು ಪ್ರಧಾನಿಯಾಗಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕ್ವಂಯ್ ಅಂದ್ರೆ ಎನ್‌ಕೌಂಟರ್:
ಬಿಜೆಪಿ ಅಧಿಕಾರಕ್ಕೆ ಬಂದ್ರೆ ಉತ್ತರಪ್ರದೇಶದ ಮಾದರಿ ಜಾರಿಗೆ ಬರಲಿದೆ. ಕ್ವಂಯ್ ಅಂದ್ರೆ ಎನ್‌ಕೌಂಟರ್ ಆಗುತ್ತೆ, ಭಾರತದ ವಿರುದ್ಧ ಮಾತನಾಡಿದ್ರೆ ಢಂ ಢಂ ಮಾಡ್ತೀವಿ, ರೋಡ್ ಮೇಲೆಯೇ ಡಿಷ್ಕ್ಯಾಂ ಆಗುತ್ತೆ ಮುಂದೆ ರಾಜ್ಯದಲ್ಲಿ ಈ ವ್ಯವಸ್ಥೆ ಜಾರಿಗೆ ಬರುತ್ತೆ ಎಂದು ಯತ್ನಾಳ್ ಹೇಳಿದ್ದಾರೆ.

By admin

Leave a Reply

Your email address will not be published. Required fields are marked *