ಚಿಕ್ಕಬಳ್ಳಾಪುರ : ಹಕ್ಕಿ ಜ್ವರ ರಾಜ್ಯಕ್ಕೂ ಕಾಲಿಟ್ಟಾಯ್ತು. ಹಕ್ಕಿಜ್ವರ ಕಾಣಿಸಿಕೊಂಡಿರೋ ಗ್ರಾಮದಲ್ಲಿರೋ ಕೋಳಿಗಳನ್ನೆಲ್ಲಾ ಆಧಿಕಾರಿಗಳು ಸಾಮೂಹಿಕ ಹತ್ಯೆ ಮಾಡಿ ಗುಂಡಿಗೆ ಹಾಕಿ ಮುಚ್ಚಿದ್ದಾಯ್ತು. ಆದರೆ ಹತ್ಯೆ ಮಾಡಿದ ಕೋಳಿಗಳಿಗೆ ಪರಿಹಾರ ಎಲ್ಲಿ..? ಅದೆಷ್ಟು ಕೊಡ್ತಿರಾ, ಅದ್ಯಾವಾಗ ಕೊಡ್ತೀರಾ? ಅಂತ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಪಕ್ಷಿಗಳು ಅದ್ರಲ್ಲೂ ಕೋಳಿಗಳಿಗೆ ಮಾರಕವಾಗಿರೋ ಡೆಡ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಎರಡು ದಿನಗಳಿಂದ ಗ್ರಾಮದಲ್ಲೇ ಬೀಡುಟ್ಟಿದೆ. ಇರೋ ಬರೋ ಕೋಳಿಗಳನ್ನ ಸೆರೆಹಿಡಿದು ಹತ್ಯೆ ಮಾಡಿದೆ.
ಹಕ್ಕಿ ಜ್ವರ ನಿಯಂತ್ರಣ ಮಾಡಲು ಗ್ರಾಮದಲ್ಲಿರುವ ಮನೆ ಮನೆಗಳಿಗೆ ತೆರಳಿ ಮನೆಯಲ್ಲಿರುವ ಕೋಳಿಗಳನ್ನ ವಶಕ್ಕೆ ಪಡೆದು ಗ್ರಾಮ ಹೊರವಲಯದಲ್ಲಿ ಗುಂಡಿ ತೋಡಿ ಕೋಳಿಗಳನ್ನ ಮುಚ್ಚಿ ನಾಶ ಮಾಡಲಾಗಿದೆ. ತಪ್ಪಿಸಿಕೊಂಡ ಕೋಳಿಗಳಿಗಾಗಿ ಸಿಬ್ಬಂದಿ ಹುಡುಕಾಡಿ ಹಿಡಿಯುತ್ತಿದ್ದಾರೆ ಎಂಬ ಮಾಹಿತಿ ವರದಿಯಾಗಿದೆ.