ನಟ ದರ್ಶನ್ ಮತ್ತೆ ‘ದಿ ಡೆವಿಲ್’ ಚಿತ್ರೀಕರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಸ್ಥಗಿತಗೊಂಡಿದ್ದ ಶೂಟಿಂಗ್‌ಗೆ ಇಂದು ಚಾಲನೆ ನೀಡಲಾಗಿದೆ. ಇಂದಿನಿಂದ ಮಾ.15ರವರೆಗೆ ಮೈಸೂರಿನಲ್ಲಿ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಮಾಡಲು ಅನುಮತಿ ಸಿಕ್ಕಿದೆ.

ಈ ಹಿನ್ನೆಲೆ, ದರ್ಶನ್ ಚಿತ್ರೀಕರಣಕ್ಕೆ ಬಂದಿದ್ದಾರೆ. ಸರ್ಕಾರಿ ಅಥಿತಿ ಗೃಹದಲ್ಲಿ ಶೂಟಿಂಗ್ ನಡೆಯುತ್ತಿದೆ. ಮಾ.15ರಂದು ಲಲಿತ್ ಮಹಲ್ ಪ್ಯಾಲೆಸ್‌ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ.

ಮೈಸೂರಿನಲ್ಲಿ ರೇಣುಕಾಸ್ವಾಮಿ ಪ್ರಕರಣದ ಸಂಬಂಧ ದರ್ಶನ್ ಬಂಧನವಾಗಿತ್ತು. ‘ಡೆವಿಲ್’ ಸಿನಿಮಾಗೆ ಚಿತ್ರೀಕರಣಕ್ಕೆಂದು ರ್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ತಂಗಿದ್ದ, ವೇಳೆ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ 9 ತಿಂಗಳ ಬಳಿಕ ಮತ್ತೆ ಮೈಸೂರಿನಲ್ಲಿ ‘ದಿ ಡೆವಿಲ್’ ಶೂಟಿಂಗ್‌ನಲ್ಲಿ ನಟ ಭಾಗಿಯಾಗಿದ್ದಾರೆ. ಈ ಸುದ್ದಿ ಕೇಳಿ ಡಿಬಾಸ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಈ ಸಿನಿಮಾಗೆ ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್‌ಗೆ ರಚನಾ ರೈ ಜೋಡಿಯಾಗಿದ್ದಾರೆ. ‘ಬಿಗ್ ಬಾಸ್ ಕನ್ನಡ 10’ರ ಸ್ಪರ್ಧಿ ವಿನಯ್ ಗೌಡ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ.

Leave a Reply

Your email address will not be published. Required fields are marked *